

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಶಾಸಕ ಎಂ.ಝಡ್ ಜಮೀರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರಿ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿದ್ದು, ಕನ್ನಡ ಬಾವುಟ, ರಾಷ್ಟ್ರ ಧ್ವಜ ಹಿಡಿದು ಸಿಎಎ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಧರ್ಮದ ಆಧಾರದಲ್ಲಿ ಆಡಳಿತ ನಡೆಸುವುದನ್ನು ನಿಲ್ಲಿಸಿ ಭಾರತ ಉಳಿಸಿ ಎಂದು ಒತ್ತಾಯಿಸಿದರು.
NRC ಮತ್ತು CAA ರಿಜೆಕ್ಟ್ ಅಂತ ಬ್ಯಾನರ್ಗಳು ಎಲ್ಲರ ಕೈಯಲ್ಲಿ ರಾರಾಜಿಸಿದ್ದವು. ಪ್ರತಿಭಟನಾ ಸಮಾವೇಶದ ಭದ್ರತೆಗೆ 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಆಗಿತ್ತು.