ಬಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ABVP Protest
Published on

ಮುಂಡಗೋಡ: ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಕರಗಿನಕೊಪ್ಪ ಸನಿಹದ ಡಿಪ್ಲೋಮಾ ಕಾಲೇಜು ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ಎಬಿವಿಪಿ ವಿದ್ಯಾರ್ಥಿಗಳು ಹಾಗೂ ತಾಲೂಕು ಬಿಜೆಪಿ ಘಟಕದವರು ಪಟ್ಟಣದ ಕೋರ್ಟ ಸರ್ಕಲ್ ಬಳಿ ಸೋಮವಾರ ಬ್ರಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಂಕರ ಗೌಡಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ನಿನ್ನೆಯಿಂದ ಬಸ್​ಗಳ ಟಿಕೇಟ್ ದರವನ್ನು ಶೇ.15ರಷ್ಟು ಏರಿಕೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿರುವ ಕಾರಣ ಎಲ್ಲ ಬಸ್​ಗಳು ಜನರಿಂದ ತುಂಬಿ ತುಳುಕುತ್ತಿವೆ. ಹೆಚ್ಚುವರಿ ಬಸ್ ಓಡಿಸುವ ಬದಲು ಇರುವ ಬಸ್ ಸಂಚಾರದಲ್ಲಿಯೂ ಕಡಿತ ಮಾಡಿದ್ದು ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಇದೀಗ ಗಾಯದ ಮೇಲೆ ಬರೆ ಎನ್ನುವ ಹಾಗೆ ಬಸ್ ಪ್ರಯಾಣ ದರದಲ್ಲಿ ಶೇ. 15ರಷ್ಟು ಹೆಚ್ಚಿಗೆ ಮಾಡಲಾಗಿದೆ. ಕೂಡಲೆ ಹೆಚ್ಚಿಸಿರುವ ಪ್ರಯಾಣ ದರವನ್ನು ಕೈ ಬಿಡಬೇಕು. ಬಸ್​ಗಳನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವುದು ಅವಶ್ಯವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತಾಲೂಕಿನ ಕರಗಿನಕೊಪ್ಪ ಬಳಿಯ ಡಿಪ್ಲೋಮಾ ಕಾಲೇಜು ಬಳಿ ಬಸ್ ನಿಲುಗಡೆ ಮಾಡುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಪರದಾಡುತ್ತಿದ್ದಾರೆ. ಹತ್ತಾರು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಯಾವೂದೆ ಪ್ರಯೊಜನವಾಗಿಲ್ಲ. ಶಿರಸಿ ಹುಬ್ಬಳ್ಳಿ ಮಧ್ಯ ಸಂಚರಿಸುವ ಎಲ್ಲ ಬಸ್​ಗಳನ್ನು ಡೀಪ್ಲೋಮಾ ಕಾಲೇಜು ಬಳಿ ನಿಲುಗಡೆ ಮಾಡುವಂತೆ ಎಬಿವಿಪಿ ಸಂಘಟನೆ ವತಿಯಿಂದ ಆಗ್ರಹಿಸಲಾಯಿತು.

ಬಿಜೆಪಿ ಮುಖಂಡ ಎಲ್.ಟಿ. ಪಾಟೀಲ,ಮಂಜುನಾಥ ಪಾಟೀಲ,ಪಿ.ಜಿ. ತಂಗಚ್ಚನ್,ಲೇಸಮ್ಮ,ಸಂತೋಷ ತಳವಾರ,ಬಸವರಾಜ ತನಿಖೆದಾರ, ಪ್ರಕಾಶ ಬಡಗಿ, ಶಂಕರ ಲಮಾಣಿ,ಮಂಜುನಾಥ ನಡಗೇರಿ ಷಣ್ಮುಖ ಕೊಳೂರ,ದೇವೆಂದ್ರ ಕೆಂಜೋಣ್ಣವರ, ಎವಿಬಿಪಿಯ ಯಶರಾಜ ಬೇಣ್ಣಿ,ನಿಂಗಪ್ಪ ಸುಳ್ಳದ,ಶಿವಾನಂದ ಬೀಡಿ,ಅರ್ಚನಾ ಸಾಳುಂಕೆ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net