

ಹುಬ್ಬಳ್ಳಿ: ಇಲ್ಲಿಯ ನವನಗರದ ಗುಡ್ಡದ ಮೇಲಿರುವ ಕೆಎಸ್ಆರ್ ಪಿ ಹನುಮಾನ ದೇವಸ್ಥಾನ ಹಾಗೂ ನಾಗದೇವತಾ ಗುಡಿಗೆ ಸರಿಯಾದ ರಸ್ತೆ ಒದಗಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಹನುಮಾನ ದೇವಸ್ಥಾನ ಹಿಂಬದಿಯಲ್ಲಿ ಬೃಹತ್ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ಅನೇಕ ದಶಕಗಳಿಂದ ಈ ದೇವಸ್ಥಾನಗಳಿಗೆ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ನಿತ್ಯವೂ ಪೂಜೆ ಸಲ್ಲುತ್ತದೆ. ಆದರೆ, ಈ ಕಟ್ಟಡಕ್ಕಾಗಿ ಅಲ್ಲಿನ ದೇವಸ್ಥಾನಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ದಾರಿ ಬಂದ್ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ದೇವಸ್ಥಾನಗಳಿಗೆ ಸರಿಯಾದ ಮಾರ್ಗ ಮಾಡಿಕೊಡಬೇಕು. ಅಲ್ಲಿಯವರೆಗೂ ಕಟ್ಟಡ ಕಾಮಗಾರಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನೀತಾ ಮಾಳವದಕರ, ನೀಲವ್ವ ಅರವಳದ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಲ್ಲಿಗವಾಡ, ಉಪಾಧ್ಯಕ್ಷ ಸ್ವಾಮಿ ಮಹಾಜನಶೆಟ್ಟರ, ರಮೇಶ ನಂದ್ಯಾಲ, ಮಂಜುನಾಥ ಹೆಬಸೂರ, ಅನಿಲ ರೂಗಿ, ಬಸವರಾಜ ಅರವಳದ, ಬಸವರಾಜ ಚಳಗೇರಿ, ಸಂತೋಷ ಸೋಗಿ, ಹನುಮಂತ, ಮಲ್ಲೇಶ ಇದ್ಲಿ, ರಾಜು ಬೆಂಗೇರಿ, ಪ್ರಭು ಕರೆಪ್ಪಗೌಡರ್, ರಾಜು ಪಾಟೀಲ್, ಬಸನಗೌಡ ಸಿದ್ದನಗೌಡರ್, ಅನು ಶೆಟ್ಟಿ, ಸುನೀತಾ ಮೋಹಿತೆ, ಅನ್ನಪೂರ್ಣ ಪಾಟೀಲ್, ರೈತ ಮೋರ್ಚಾ ಅಧ್ಯಕ್ಷ ಮಂಜುನಾಥ ಇಂಗಳಹಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.