

ರಾಯಚೂರು ಕಾರ್ಮಿಕ ವಿರೋಽ ನೀತಿಗಳನ್ನು ಜಾರಿಗೊಳಿಸಲು ಮುಂದಾಗುತ್ತಿರುವ ಕೇಂದ್ರ ಸರ್ಕಾರ ನಡೆಯನ್ನು ಖಂಡಿಸಿ ಟಿಯುಸಿಐ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಪರವಾದ ಕಾಯ್ದೆಯನ್ನು ಜಾರಿಗೊಳಿಸದೇ ಹೊಸ ಕಾಯ್ದೆಗಳನ್ನು ಅಂಗೀಕರಿಸಿದನ್ನು ಖಂಡಿಸಿ, ಬಂಡವಾಳ ಶಾಹಿ ಪರ ನೀತಿಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ಕಾರ್ಮಿಕರಿಗೆ ಕನಿಷ್ಠ ವೇತನ, ಭದ್ರತೆ ಒದಗಿಸಿದೇ ಕಾರ್ಮಿಕರನ್ನು ರಕ್ಷಣೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.ಕಾರ್ಮಿಕರ ಶ್ರಮವನ್ನು ಅಗ್ಗದ ದರದಲ್ಲಿ ಸುಲಿಗೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಪ್ರಧಾನಿ ಮೋದಿ ಸರ್ಕಾರ ನಡೆಯನ್ನು ಖಂಡಿಸಿದರು.
ಕಾರ್ಮಿಕರ ವಿರೋಽಯಾಗಿರುವ ೪ ಕಾಯ್ದೆಗಳನ್ನು ರದ್ದುಗೊಳಿಸಲು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತವಾಗಿ ಪ್ರತಿಭಟನೆ ಕರೆ ನೀಡದ ಹಿನ್ನೆಲೆಯಲ್ಲಿ ಬೆಂಬಲಿಸಿ
ಪ್ರತಿಭಟನೆ ನಡೆಸಲಾಯಿತು. ಕನಿಷ್ಟ ವೇತನವನ್ನು ಜಾರಿಗೊಳಿಸಿ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ೩೧೫೦೦ ರೂ,
ವೇತನ ಹೆಚ್ಚಳ ಮಾಡಬೇಕು, ಎಲ್ಲರಿಗೂ ಕೆಲಸದ ಸಮಯ ೮ ಗಂಟೆಗೆ ನಿಗದಿಪಡಿಸಬೇಕು, ಸಾಮಾಜಿಕ ಭದ್ರತೆ
ಒದಗಿಸಿಕೊಡಬೇಕು, ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸಿ ಸಮಾನ ವೇತನವನ್ನು ಖಚಿತಪಡಿಸಬೇಕು,
ವಲಸೆ ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಿ.ಅಮರೇಶ, ಜಿ.ಅಡವಿರಾವ್, ವೆಂಕಟೇಶ, ಆಂಜನೇಯ, ಸತ್ಯಪ್ಪ, ಶಫಿ,ಶೇಖ್ ಹುಸೇನ್ ಬಾಷಾ, ರಾಮು, ರಾಜು, ಕರಿಮುಲ್ಲಾ,ಪ್ರಕಾಶ ಸೇರಿದಂತೆ ಅನೇಕರು ಇದ್ದರು.