

ಇಳಕಲ್ಲ(ಗ್ರಾ): ಕೇಂದ್ರ ಸರ್ಕಾರ ಇತ್ತೀಚೆಗೆ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಅಂಜುಮನ್ ಸಂಸ್ಥೆ ಮತ್ತು ಮುಸ್ಲಿಂ ಸಮದಾಯದವರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಕಂಠಿ ಸರ್ಕಲ್‌ಗೆ ತಲುಪಿದಾಗ ನಂತರ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯು ಗೊರಬಾಳ ನಾಕಾ, ವಾಲ್ಮೀಕಿ ಮಂದಿರ, ಡೈಟ್ ಕಾಲೇಜು, ಸರ್ಕಾರಿ ಆಸ್ಪತ್ರೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಮೆರವಣಿಗೆಯ ನೇತೃತ್ವವನ್ನು ಅಬ್ದುಲ್‌ರಜಾಕ ತಟಗಾರ, ಬಾವುದ್ದೀನ್ ಖಾಜಿ, ಮುರ್ತುಜಸಾಬ ಕರಡಿ, ಮೋದಿನಬಾಷಾ ಹುಣಚಗಿ, ಟಿಪ್ಪು ಭಂಡಾರಿ, ಆರೀಪ್ ಣಿಬಂದ, ನಿಸಾರ್‌ಅಹ್ಮದ ಬೇಪಾರಿ, ರಫೀಕ್ ಕೋಡಿಹಾಳ, ಯುಸ್ು ಬಾಗವಾನ ವಹಿಸಿದ್ದರು.