ಅಂಬೇಡ್ಕರ್ ಭಾವಚಿತ್ರ ಇಡಿದು ಧರಣಿ

25blrp7
ಡಾ.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಹಗುರ ಹೇಳಿಕೆ ನೀಡಿದ್ದಾರೆಂದು ಆಕ್ರೋಶಗೊಂಡ ದಸಂಸ(ಅಂಬೇಡ್ಕರ್ ವಾದ)ಮುಖಂಡರು ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಭಟನೆ ನಡೆಸಿದರು.
Published on

ಬೇಲೂರು: ಡಾ.ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಸಂಸ(ಅಂಬೇಡ್ಕರ್ ವಾದ)ಹಾಗೂ ದಲಿತ ಮುಖಂಡರು ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾಹಾರ ಸಲ್ಲಿಸಿ ಅಂಬೇಡ್ಕರರ ಭಾವಚಿತ್ರಗಳನ್ನಿಡಿದು ಬುಧವಾರ ಪ್ರತಿಭಟನೆ ನಡೆಸಿದರು.

ದಲಿತ ಮುಖಂಡ ಅಡಗೂರು ರಂಗಪ್ಪ ಮಾತನಾಡಿ, ದಲಿತರು, ಶೋಷಿತರು, ತಳ ಸಮುದಾಯಗಳ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಸಭೆಯಲ್ಲಿ ಹಗುರವಾಗಿ ಮಾತಾಡಿರುವುದು ಸರಿಯಲ್ಲ. ಜತೆಗೆ ಸಂವಿಧಾನದಡಿ ಚುನಾವಣೆಯಲ್ಲಿ ಆಯ್ಕೆಯಾಗಿ ಜವಾಬ್ದಾರಿಯುತ ಸಚಿವರಾಗಿ ಮನಸ್ಸಿಗೆ ಬಂದಂತೆ ಮಾತನಾಡುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಮಿತ್ ಷಾ ಅವರನ್ನು ಪ್ರಧಾನಿ ಸಂಪೂಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ದಸಂಸ(ಅಂಬೇಡ್ಕರ್ ವಾದ)ಮುಖಂಡ ಲಕ್ಷ್ಮಣ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಮಾತನಾಡುವ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ. ಸಚಿವ ಸ್ಥಾನದಿಂದ ತಕ್ಷಣವೇ ವಜಾಗೊಳಿಸಬೇಕು.ಅಮೀತ್ ಷಾ ಅವರು ತಕ್ಷಣವೇ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕೆಇಬಿ ನಿವೃತ್ತ ಸಹಾಯಕ ಇಂಜಿನಿಯರ್ ಲಕ್ಷ್ಮಯ್ಯ, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ದಾಸಪ್ಪ, ಮತಿಘಟ್ಟ ಗ್ರಾಪಂ ಸದಸ್ಯ ಮಹೇಶ್, ದಸಂಸ ಮುಖಂಡರಾದ ಸತೀಶ್, ಕೃಷ್ಣಯ್ಯ, ಆಟೋ ಲಕ್ಷ್ಮಣ್, ಮಂಜುನಾಥ್, ಸುರೇಶ್ ಮುದಿಗೆರೆ, ಉಮೇಶ್, ರುದ್ರೇಶ್, ಜಗದೀಶ್, ಕೃಷ್ಣಮೂರ್ತಿ, ತೀರ್ಥ, ಸುರೇಶ್ ಕೂಡ್ಲೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net