

ಗದಗ: ಸೇವಾ ಭದ್ರತೆಗಾಗಿ ಮನವಿ ಸಲ್ಲಿಸಲು ಹೋಗಿದ್ದ ಅತಿಥಿ ಉಪನ್ಯಾಸಕಿಯರಿಗೆ ‘ಬೇಕಾದರೆ ಕೆಲಸ ಮಾಡಿ, ಇಲ್ಲವಾದರೆ ಹೋಗಿ’ ಎಂದು ಹೇಳುವ ಮೂಲಕ ಅಗೌರವ ತೋರಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸಚಿವರ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ಬಡೆಸಿದ ಘಟನೆ ಸೋಮವಾರ ಗದಗನ ಗಾಂಧಿ ವೃತ್ತದಲ್ಲಿ ಜರುಗಿತು.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹನಮಂತಗೌಡ ಕಲ್ಮನಿ, ಕನಿಷ್ಠ ವೇತನ ಪಡೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿ ಅಸಭ್ಯವಾಗಿ ವರ್ತಿಸಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಡಾ. ಸುಜಾತಾ ಬರದೂರ, ಡಾ. ಚಂದ್ರಶೇಖರ ಕಾಳಣ್ಣವರ, ಸಂತೋಷ ಮುರಶಿಳ್ಳಿನ, ಶಿಲ್ಪಾ ಹಿರೇಮಠ, ಮಲ್ಲಪ್ಪ ಮಾದರ, ಕೃಷ್ಣ ಬೆಂತೂರ, ಜೆ.ಪಿ. ದೊಡ್ಡೂರ, ಎನ್.ಸಿ. ಬಸಾಪುರ, ವೈ.ಜೆ. ಹಂಚಿನಾಳ, ನಿಂಗರಾಜ ವಾಲ್ಮೀಕಿ, ಕರಿಯಪ್ಪ ಕುಡವಳ್ಳಿ, ಕಲ್ಲಪ್ಪ ಹಾದಿಮನಿ, ಪದ್ಮಾ ತಳಕಲ್, ಜಿ.ವಿ. ಮೇಟಿ, ವಿರೂಪಾಕ್ಷ ಸಂಗನಾಳ, ಕೆ.ಕಲ್ಯಾಣಿ, ವಿ.ಎಂ. ದೇಸಾಯಿಗೌಡ್ರ, ಜ್ಯೋತಿ ಗುದ್ದಿನ, ನೂರಜಹಾನ್ ಕದಾಂಪುರ, ತಾಜಿನಾಬಾನು ಬಳಬಟ್ಟಿ, ಗೀತಾ ಎಚ್.ಎಂ., ಎಸ್.ಎ. ಸಂಗನಾಳ, ಚಂದ್ರು ಎಂ. ರಾಥೋಡ್, ಬಿ.ಪಿ. ಪರಣ್ಣವರ, ಬಿ.ಕೆ. ಕಂಬಳಿ, ವಿ.ಬಿ. ಪೊಲೀಸ್ಪಾಟೀಲ, ಎನ್.ಎಸ್. ಹೊನ್ನೂರು, ಆರ್.ವಿ. ಪವಾಡಶೆಟ್ಟಿ ಇದ್ದರು.