ಸಮರ್ಪಕ ಬಸ್ ಓಡಿಸಲು ಆಗ್ರಹಿಸಿ ಧರಣಿ

students protesting on road
Published on

ನವಲಗುಂದ: ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಕುಮಾರಗೊಪ್ಪ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು ಕುಮಾರಗೊಪ್ಪ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಳ್ಳು ಕಂಟಿ ಹಾಗೂ ಕಲ್ಲುಗಳನ್ನಿಟ್ಟು ರಸ್ತೆ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಇದರಿಂದಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆ ನಡೆಸಿದ್ದರಿಂದ ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಆಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ಜನಾರ್ದನ ಬಿ. ಅವರು ವಿದ್ಯಾರ್ಥಿಗಳ ಮನವೊಲಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಗ್ರಾಮಸ್ಥರಾದ ಸಿದ್ದು ಕುಲಕರ್ಣಿ, ಚಂದ್ರಶೇಖರಪ್ಪ ಗುರುಶಿದ್ದಪ್ಪನವರ, ಮಹಾಂತೇಶ ಕುಲಕರ್ಣಿ, ಮಹಾಲಿಂಗಯ್ಯ ಹೊಸಮನಿ, ಬಸವರಾಜ ಕುಲಕರ್ಣಿ, ಮಹಾಂತೇಶ ಬಳಗಾನೂರಮಠ, ನಿಂಗಯ್ಯ ದಂಡಿನ, ಈರಣ್ಣ ಖಾತೆದಾರ, ಕಲ್ಲಪ್ಪ ಕುಲಕರ್ಣಿ, ಮಂಜುನಾಥ ಕಾಲವಾಡ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net