

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪಾವೂರು ಗ್ರಾಮ ಪಂಚಾಯಿತಿ ಆಡಳಿತಗಾರರು ಜಮೀನುರಹಿತರಿಗೆ ನಿವೇಶನ ನೀಡಲು ನಿರ್ಲಕ್ಷೃ ತಾಳಿದ್ದಾರೆಂದು ಆರೋಪಿಸಿ ನಿವೇಶನರಹಿತರು ಗುರುವಾರ ಬೆಳಗ್ಗೆ ಸರ್ಕಾರಿ ಜಮೀನಿನಲ್ಲಿ ಟೆಂಟ್‌ಗಳನ್ನು ಅಳವಡಿಸಿ ಪ್ರತಿಭಟನೆ ನಡೆಸಿದರು. ಪಂಚಾಯಿತಿಗೆ ತೆರಳಿ ನಿವೇಶನ ನೀಡುವಂತೆ ಆಗ್ರಹಿಸಿದರು.
ಪಾವೂರು ಗ್ರಾಮ ಪಂಚಾಯಿತಿ ಸಮೀಪ ಸ್ವಚ್ಛ ಸಂಕೀರ್ಣಕ್ಕೆ ತಾಗಿಕೊಂಡು ಎಕರೆಗಟ್ಟಲೆ ಖಾಲಿ ಜಮೀನು ಇದೆ. ಈ ಜಮೀನು ಸರ್ಕಾರಕ್ಕೆ ಸೇರಿದ್ದೆಂದು ಹೇಳಿ ಗುರುವಾರ ಬೆಳಗ್ಗೆಯೇ 30ರಷ್ಟು ಮಂದಿ ಟಾರ್ಪಾಲಿನ ಜೋಪಡಿ ಹಾಕಿ ಕುಳಿತರು. ಕಳೆದ 15ರಿಂದ 20 ವರ್ಷಗಳಲ್ಲಿ ಬಾಡಿಗೆ ಮನೆಯಲ್ಲೇ ವಾಸವಿದ್ದು, ಜಮೀನು ಇಲ್ಲದೆ ಮನೆ ನಿರ್ಮಾಣ ಅಸಾಧ್ಯವಾಗಿದೆ. ಪ್ರತಿದಿನದ ದುಡಿಮೆಯಿಂದ ಬದುಕುವ ನಾವು ದಿನದ ಖರ್ಚಿಗೂ ಸಂಕಷ್ಟಪಡುತ್ತಿದ್ದು, ಈ ನಡುವೆ ಮನೆ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದೇವೆ. ಗ್ರಾಮದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಇದ್ದರೂ ನೀಡದೆ ನಿರ್ಲಕ್ಷೃ ತಾಳಲಾಗಿದೆ. ಸ್ವಚ್ಛ ಸಂಕೀರ್ಣದ ಬಳಿ ಎಕರೆಗಟ್ಟಲೆ ಸರ್ಕಾರಿ ಜಮೀನಿದ್ದು ಅದರಲ್ಲಿ ಮನೆ ಕಟ್ಟಲು ಮೂರು ಸೆಂಟ್ಸ್ ಜಮೀನು ನೀಡಿ ಎಂದು ನಿವೇಶನರಹಿತರು ಆಗ್ರಹಿಸಿದರು.
ಹತ್ತು ವರ್ಷಗಳ ಹಿಂದೆಯೂ ಇಲ್ಲಿ ಜೋಪಡಿ ಹಾಕಿ ವಾಸ ಆರಂಭಿಸಿದ್ದಾಗ ಪಂಚಾಯಿತಿಯಿಂದ ಕಾನೂನು ಪ್ರಕಾರ ನಿವೇಶನ ನೀಡುವ ಭರವಸೆ ನೀಡಿ ಇಲ್ಲಿಂದ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ನಿವೇಶನ ನೀಡುವ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ನಿವೇಶನರಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೇಶನಕ್ಕಾಗಿ ಆಗ್ರಹಿಸುವುದು ತಪ್ಪಲ್ಲ. ಆದರೆ ಗ್ರಾಮ ಪಂಚಾಯಿತಿಯಿಂದ ಮೀಸಲಿಡಲಾಗಿರುವ ಜಮೀನು ಬಿಟ್ಟು ಮನೆ ನಿರ್ಮಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ನಿವೇಶನರಹಿತರ ಜೊತೆ ನಾವಿದ್ದೇವೆ. ಅಬ್ದುಲ್ ಮಜೀದ್, ಪಾವೂರು ಗ್ರಾಪಂ ಅಧ್ಯಕ್ಷ https://www.vijayavani.net/mangalore-switzerland-jurik-kannada-koota-dr-prabitha https://www.vijayavani.net/website-lokarpane