

ವಿಜಯವಾಣಿ ಸುದ್ದಿಜಾಲ ನಂದಗುಡಿ
ನಿವೇಶನ ರಹಿತ ಪರಿಶಿಷ್ಟ ಜಾತಿಯವರಿಗೆ ನಂದಗುಡಿ ಸ.ನಂ.5ರಲ್ಲಿ 8 ಎಕರೆ 33 ಗಂಟೆಯಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳ ನೇತೃತ್ವದಲ್ಲಿ ನಂದಗುಡಿ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಂದಗುಡಿ ರಾಗಿ ಗುಡ್ಡ ಹತ್ತಿರ ಗೋಮಾಳದಲ್ಲಿ 8.33 ಎಕರೆಯನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕಾಯ್ದಿರಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಿವೇಶನ ರಹಿತರಾಗಿದ್ದು, ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ನಿವೇಶನ ನೀಡುವಂತೆ ನೂರಾರು ಮಹಿಳೆಯರು ಪಟ್ಟು ಹಿಡಿದರು.
ನಿವೇಶನ ಉಳ್ಳವರೂ ನಿವೇಶನಕ್ಕಾ ಅರ್ಜಿಗಳನ್ನು ಸಲ್ಲಿಸಿದ್ದು, ಉಳ್ಳವರ ಪಾಲಾಗಲು ಬಿಡುವುದಿಲ್ಲ. ಒಂದು ವೇಳೆ ಉಳ್ಳವರಿಗೆ ನೀಡಿದ್ದೇ ಆದರೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.