ಕೈ ಆಡಳಿತಾವಧಿಯಲ್ಲೇ ವಿಧ್ವಂಸಕ ಕೃತ್ಯ ಹೆಚ್ಚು

protest
BJP protest
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಬಿಜೆಪಿ ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಹಿಂದುಗಳು ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದೇವೆ. ಆದರೆ, ಕೆಲ ದೇಶದ್ರೋಹಿಗಳು ವಿದ್ವಂಸಕ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಕೇರಳದಲ್ಲಿ 70 ಸಾವಿರಕ್ಕೂ ಹೆಚ್ಚು ಹಿಂದು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಪತ್ತೆ ಹಚ್ಚಲು ಪೊಲೀಸರಿಗೂ ಸಾಧ್ಯವಾಗಿಲ್ಲ. ರಾಜ್ಯವನ್ನು ಇಂಥದೇ ಪರಿಸ್ಥಿತಿಗೆ ನೂಕುವ ಕೆಲಸ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ ಎಂದರು.
ಉತ್ತರ ಕರ್ನಾಟಕಕ್ಕೂ ಲವ್ ಜಿಹಾದ್, ಮತಾಂತರ ಚಟುವಟಿಕೆ ವ್ಯಾಪಕವಾಗಿ ಹರಡುತ್ತಿದೆ. ನೇಹಾ ಹಿರೇಮಠ ಅವರ ಕೊಲೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಕೃತ್ಯಕ್ಕೆ ಯಾರು ಪ್ರೇರಣೆ ನೀಡಿದ್ದಾರೆ, ಇದರ ಹಿಂದಿನ ಜಾಲ ಯಾವುದು? ಯಾವ ಸಂಘಟನೆಗಳ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಬಜರಂಗದಳದ ತುಮಕೂರು ವಿಭಾಗ ಸಂಯೋಜಕ್ ನರೇಶ್ ರೆಡ್ಡಿ ಮಾತನಾಡಿ, ನಾವು ಸೌಹಾರ್ದಯುತವಾಗಿ ಇದ್ದೇವೆ. ಆದರೆ, ಕೆಲವರು ಲವ್ ಜಿಹಾದ್, ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆ ಸ್ಫೋಟದ ಕೃತ್ಯನಡೆಸಿದ್ದು, ಕಾಂಗ್ರೆಸ್ ಬಂದಾಗಲೇ ಈ ರೀತಿಯ ದುಷ್ಕೃತ್ಯಗಳು ಹೆಚ್ಚುತ್ತವೆ ಎಂದು ಆರೋಪಿಸಿದರು.
ಹಿಂದು ಹೆಣ್ಣು ಮಕ್ಕಳನ್ನು ಗುರಿಯಾಗಿಸಿ, ವ್ಯಾಮೋಹ ತೋರಿಸಿ, ಹತ್ಯೆ ಮಾಡಿರುವ ಫಯಾಜ್‌ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಮುಂದೆ ನಮ್ಮ ಮನೆ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬಾರದಂತೆ ತಡೆಯಲು ಈ ಕೆಲಸ ಮಾಡಬೇಕು. ಕಠಿಣ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು, ಷಡ್ಯಂತ್ರ ನಡೆಯುತ್ತಲೇ ಇರುತ್ತವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net