ಹನುಮ ಧ್ವಜ ತೆರವು ಖಂಡಿಸಿ ಪ್ರತಿಭಟನೆ

1
Published on

ಚನ್ನರಾಯಪಟ್ಟಣ : ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ಜಜ ತೆರವುಗೊಳಿಸಿದ ಪ್ರಕರಣ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಶ್ರವಣಬೆಳಗೊಳ ಮಂಡಲ ಬಿಜೆಪಿ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ಪಟ್ಟಣದ ಹೊಸ ಬಸ್‌ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದರು. ಬಿಜೆಪಿ ಮುಖಂಡ ನಂಬಿಹಳ್ಳಿ ಗಿರೀಶ್ ಮಾತನಾಡಿ, ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜ ಕೆಳಗಿಳಿಸಿ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದೆ. ಇದೇ ವೇಳೆ ರಾಷ್ಟ್ರ ಧ್ವಜವನ್ನು ಹಾರಿಸಿ ಆದಕ್ಕೆ ಅವಮಾನ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಹೀನ ಸಂಸ್ಕೃತಿಗೆ ಮುಂದಾಗಿದೆ. ಇನ್ನೊಂದೆಡೆ ರಾಷ್ಟ್ರಪತಿಯವರಿಗೆ ಸಿಎಂ ಸಿದ್ರಾಮಯ್ಯ ಏಕವಚನ ಬಳಕೆ ಮಾಡುವ ಮೂಲಕ ಸಂವಿಧಾನಬದ್ಧ ಹುದ್ದೆಗೆ ಆಗೌರವ ಸಲ್ಲಿಸಿದ್ದಾರೆ ಎಂದು ದೂರಿದರು.
ನಂತರ ತಹಸೀಲ್ದಾರ್ ಬಿ.ಎಂ.ಗೋವಿಂದ ರಾಜ್‌ಗೆ ಮನವಿ ಸಲ್ಲಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಎಂ. ರವಿ, ಪುರಸಭಾ ಮಾಜಿ ಸದಸ್ಯ ಜಗದೀಶ್, ಹರ್ಷವರ್ಧನ, ಮುಖಂಡರಾದ ಗೌಡಗೆರೆ ಸತೀಶ, ವಿಶ್ವನಾಥ, ವಿದ್ಯಾ ಪ್ರಸಾದ್, ಮಿಲ್ ಮಂಜಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net