

ಗದಗ:
ಹುಬ್ಬಳ್ಳಿಯ ಕಿತ್ತೂರ ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಆಚರಣೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಗದಗನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಹುಯೀಲಗೋಳ ನಾರಾಯಣರಾವ ವರ್ತುಳದಲ್ಲಿ ಸೇರಿದ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ೂಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದಶಿರ್ ರಾಜೂ ಖಾನಪ್ಪನವರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂ ಸಂಟನೆಗಳ ಮುಖಂಡರು, ಕಾರ್ಯಕರ್ತರನ್ನು ಗುರಿಯಾಗಿಸಿ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಒಲೈಸುವ ಭರದಲ್ಲಿ ಒಂದಿಲ್ಲೊಂದು ಸುಳ್ಳು ಪ್ರಕರಣದಲ್ಲಿ ಹಿಂದೂ ಮುಖಂಡರನ್ನು ಸಿಲುಕಿಸುವ ಪ್ರಯತ್ನಗಳು ನಡೆದಿವೆ. ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯ ಪ್ರಮೋದ ಮುತಾಲಿಕ ಮೇಲೆ ದಾಖಲಾಗಿರುವ ಪ್ರಕರಣವನ್ನು ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕು. ದೂರು ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಸರಣಿ ಉಪವಾಸ,ಧರಣಿ, ಅಮರಣ ಉಪವಾಸ ಸತ್ಯಾಗ್ರಹಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹೇಶ ರೋಖಡೆ, ಅಶೋಕ ಬಜಂತ್ರಿ, ಈಶ್ವರ ಕಾಟವಾ, ಮಹಾಬಲೇಶ್ವರ ಶೆಟ್ಟರ, ಹುಲಿಗೆಪ್ಪ ವಾಲ್ಮೀಕಿ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ಸಂಜು ಚಟ್ಟಿ, ಮಹಾಂತೇಶ ಪಾಟೀಲ, ವಿರೇಶ ಮಾನ್ವಿ, ಈರಣ್ಣ ವಾಲ್ಮೀಕಿ, ಗುರುಜಾರ ಮರಾಠಿ, ಶಿವಕುಮಾರ ಕೊರ್ಲಹಳ್ಳಿ, ವಿನಾಯಕ ಉರುಗಲ, ಮಂಜು ಹೆಗಡೆ,ಪ್ರವಿಣ ಕೊಳ್ಳಿ, ಮಂಜುನಾಥ ಬೇಲೇರಿ, ಬಸವರಾಜ ಬನ್ನಿ ಹಲವರು ಇದ್ದರು.