

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಬಿಂಕದಕಟ್ಟಿ ಗ್ರಾಮದ ಹೊರವಲಯದಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹತ್ತಿರ ಬುದ್ದಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಮತ್ತು ಆರೋಪಿತನಿಗೆ ತಕ್ಕ ಶಿೆ ವಿಧಿಸಬೇಕೆಂದು ಆಗ್ರಹಿಸಿ ನಗರದ ಹುಯೀಲಗೋಳ ನಾರಾಯಣರಾವ ವರ್ತುಳದಲ್ಲಿ ಶ್ರೀರಾಮ ಸೇನೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.
ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಗದಗ ಪರಿಸರದಲ್ಲಿ ಮಹಿಳೆಯರಿಗೆ ಸೂಕ್ತ ರಣೆಯಿಲ್ಲದಂತಾಗಿದೆ. ಒಂದು ನಿದಿರ್ಷ್ಟ ಕೋಮಿಗೆ ಸೇರಿದ ಯುವಕರು ಹಿಂದೂ ಮಹಿಳೆಯರನ್ನು ಟಾರ್ಗೇಟ್ ಮಾಡಿ ಚುಡಾಯಿಸುವದು, ಅತ್ಯಾಚಾರವೆಸಗುವದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪೂಲೀಸ್ ಇಲಾಖೆಗೆ ಸಮಗ್ರ ಮಾಹಿತಿಯಿದ್ದರೂ ಸಹ ಪೂಲೀಸ್ ಇಲಾಖೆ ರಾಜಕೀಯ ಕಾರಣಕ್ಕೆ ಮೌನವಾಗಿದೆ ಎಂದು ಆರೋಪಿಸಿದರು. ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ಪೂಲೀಸ್ ಇಲಾಖೆ ವಿಲವಾಗಿದೆ ಎಂದು ೂಷಣೆ ಕೂಗಿದರು.
ಸಚಿವ ಪ್ರಿಯಾಂಕ ರ್ಖಗೆ ಕುರಿತು ಆರೋಪಿಸಿದ ಶ್ರೀರಾಮಸೇನೆ, ಸಂವಿಧಾನದಲ್ಲಿ ಎಲ್ಲ ಧರ್ಮಗಳ ಜನತೆಗೂ ಸಮನಾದ ಅವಕಾಶವಿದೆ. ಆದರೆ ಪದೇ ಪದೆ ಹಿಂದೂ ಮಹಿಳೆಯರು, ಹಿಂದೂ ಯುವತಿಯರು ಅತ್ಯಾಚಾರ, ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಸಂಗತಿ ಸಚಿವ ಪ್ರಿಯಾಂಕ ರ್ಖಗೆ ಅವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು.
ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹತ್ತಿರ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿೆ ವಿಧಿಸಬೇಕು. ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು. ಏಳು ದಿನದೊಳಗಾಗಿ ಸರ್ಕಾರ ಸಂತ್ರಸ್ಥೆಗೆ ಪರಿಹಾರ ನೀಡದಿದ್ದಲ್ಲಿ ಆ.28 ರಂದು ಗದಗನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರಮೋದ ಮುತಾಲಿಕ ನೇತ್ರತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಸಿದರು.
ಮಹೇಶ ರೋಖಡೆ, ಚೇತನ ಅಬ್ಬಿಗೇರಿ, ಕುಮಾರ ಮಿಟ್ಟಿಮಠ, ಕಿರಣ ಹಿರೇಮಠ, ಈಶ್ವರ ಕಾಟವಾ, ವಿರೇಶ ನಾಲ್ವಾಡ, ಅಶೋಕ ಬಜಂತ್ರಿ, ಸೋಮು ಗುಡಿ, ಈರಣ್ಣ ಗಾಣಿಗೇರ, ಕುಮಾರ ನಡಗೇರಿ, ಸಂಜು ಚೆಟ್ಟಿ, ಮಹಾಂತೇಶ ಪಾಟೀಲ, ಶಿವಯೋಗಿ ಹಿರೇಮಠ, ಸುನೀಲ ಮುಳ್ಳಾಳ ಹಲವರು ಇದ್ದರು.