

ತುಮಕೂರು : ಸಂಟಿತ ಕಾರ್ಮಿಕರು ಸೇರಿ ಅರ್ಜಿ ಸಲ್ಲಿಸಿರುವ ಎಲ್ಲ ಕಾರ್ಮಿಕರಿಗೂ ಲಾಕ್‌ಡೌನ್ ಪರಿಹಾರವಾಗಿ ತಲಾ 7500 ರೂ.ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ನೇತೃತ್ವದಲ್ಲಿ ಮನ ಕೆಲಸಗಾರರ ಸಂ, ಟೈಲರ್‌ಗಳ ಸಂ, ುಟ್‌ಪಾತ್ ವ್ಯಾಪಾರಿಗಳ ಸಂ, ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾದರು.
ಮನೆ ಕೆಲಸಗಾರರು, ಹವಾಲಿ ಕಾರ್ಮಿಕರು, ಟೈಲರ್‌ಗಳು, ಮ್ಯೆಕ್ಯಾನಿಕ್-ಸಹಾಯಕರು, ಅಟೋ, ಬಸ್, ಲಾರಿ, ಟೆಂಪೋ ಚಾಲಕರು, ದೋಬಿಗಳು, ಕ್ಷೌರಿಕರು, ಕುಂಭಾರರು, ಪುರಿ ಭಟ್ಟಿ ಕಾರ್ಮಿಕರು, ಚಿನ್ನ ಬೆಳ್ಳಿ ಕೆಲಗಾರರು ಸೇರಿ ಎಲ್ಲ ಅಸಂಟಿತ ಕಾರ್ಮಿಕರಿಗೆ ಈ ಕೂಡಲೇ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಅಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ, ರಾಜ್ಯ ಸರ್ಕಾರದ ಲಾಕ್ ಡೌನ್ ಪರಿಹಾರ ಸಮರ್ಪಕವಾಗಿ ತಲುಪಿಲ್ಲ, 11 ವಲಯದ ಕಾರ್ಮಿಕರು ದಿನವಿಡಿ ಸಾಲುಗಳಲ್ಲಿ ನಿಂತು, ಕೂಲಿ ಕಳೆಕೊಂಡು ಬಂದರೂ ನಯಾಪೈಸೆ ಕೂಡ ಬಂದಿಲ್ಲ ಎಂದರು. ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಮಣ್ಯ, ಮನೆ ಕೆಲಸಗಾರರ ಸಂ ಅನಸೂಯ , ಟೈಲರ್‌ಗಳ ಸಂದ ಮಂಜುಳಾ, ಅಟೋ ಚಾಲಕಕರ ಸಂ ಸಿದ್ದರಾಜು, ುಟ್‌ಪಾತ್ ವ್ಯಾಪಾರಿಗಳ ಸಂದ ಅಧ್ಯಕ್ಷ ರಾಜಶೆಖರ್, ಕಟ್ಟಡ ಕಾರ್ಮಿಕರ ಸಂದ ಕಲೀಲ್ ವಾತನಾಡಿದರು. ಮನವಿ ಸ್ವಿಕರಿಸಿದ ಕಾರ್ಮಿಕ ಅಧಿಕಾರಿ ರಮೇಶ್ ಮಾತನಾಡಿ, ಎಲ್ಲ ಅರ್ಹ ಅರ್ಜಿದಾರರಿಗೆ 2000ರೂ. ಬರಲಿದೆ. ಅಸಂಟಿತರ ಕಲ್ಯಾಣ ಯೋಜನೆ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು.
ಲಾಕ್‌ಡೌನ್ ಸಂಕಷ್ಟದಲ್ಲಿರುವ 55500 ಕಾರ್ಮಿಕರು ಅರ್ಜಿ ಸಲ್ಲಿಸಿರುವಾಗ ಇದುವರೆವಿಗೂ 7 ಸಾವಿರ ಕಾರ್ಮಿಕರಿಗಷ್ಟೆ ಲಾಕ್‌ಡೌನ್ ಪರಿಹಾರ ಸಿಕ್ಕಿದೆ. ಇನ್ನುಳಿದ 47500 ಅಸಂಟಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು, ಸೂಕ್ತವಾದ ಅರ್ಥಿಕ ಮಂಜೂರಾತಿ ರಾಜ್ಯ ಸರ್ಕಾರದಿಂದ ನೀಡಲು ಒತ್ತಾಯಿಸುತ್ತೇವೆ. ಎನ್.ಕೆ.ಸುಬ್ರಹ್ಮಣ್ಯ ಕಾರ್ಮಿಕ ಮುಖಂಡ