

ಉಡುಪಿ: ಆವರಣ ಗೋಡೆ ಕಟ್ಟಲು ಏಕಾಏಕಿ ಗೂಡಂಗಡಿ ತೆರವುಗೊಳಿಸಿದ ಖಾಸಗಿಯವರ ಕ್ರಮ ಖಂಡಿಸಿ ಯುವತಿಯೊಬ್ಬರು ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಭಾನುವಾರ ರಾತ್ರಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಉದ್ಯಾವರದ ವನಿತಾ ಎಂಬುವವರು ಮೆಸ್ಕಾಂ ಕಚೇರಿ ಮುಂಭಾಗದಲ್ಲಿ, ನಗರಸಭೆಯ ಸ್ಥಳದಲ್ಲಿ ಚಿಪ್ಪು ಸುಣ್ಣ ಮಾರಾಟದ ಗೂಡಂಗಡಿಯನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದರು.
ಖಾಸಗಿ ವ್ಯಕ್ತಿಗಳು ಮುನ್ಸೂಚನೆ ನೀಡದೆ ರಾತ್ರಿ ಸಮಯದಲ್ಲಿ ಅಂಗಡಿ ತೆರವುಗೊಳಿಸಿ ಕಾಂಪೌಂಡ್ ಕಟ್ಟಲು ಅಡಿಪಾಯ ಅಗೆಯುತ್ತಿದ್ದರು. ಈ ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ವನಿತಾ ಪ್ರತಿಭಟನೆ ಮುಂದಾದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.