

ಕೆ.ಆರ್.ನಗರ: ನಾಯಕ ಸಮಾಜದ ವಿರುದ್ಧ್ದ ಜಾತಿನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ನಾಯಕ ಸಮಾಜದ ಮುಖಂಡರು ಇನ್‌ಸ್ಪೆಕ್ಟರ್ ಎಸ್.ಶಿವಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ಸಾಲಿಗ್ರಾಮ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಸಿ.ಸಿ.ಮಹದೇವ್ ಮತ್ತು ಕೃಷ್ಣರಾಜನಗರ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಹಂಪಾಪುರ ಸುಬ್ಬಕೃಷ್ಣ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದ ಮುಖಂಡರು, ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಪೊಲೀಸ್ ಠಾಣೆಗೆ ತೆರಳಿ ರಮೇಶ್‌ಕತ್ತಿ ವಿರುದ್ಧ ದೂರು ಸಲ್ಲಿಸಿದರು.
ಅ.19ರಂದು ಬೆಳಗಾವಿಯ ಬಿ.ಕೆ.ಮಾಡಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಸಮಾಜವನ್ನು ಕುರಿತು ಅವಾಚ್ಯ ಶಬ್ದಗಳಿಂದ ಮಾತನಾಡಿ ನಾಯಕ ಸಮಾಜದವರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಸಮಾಜದ ವಿರುದ್ಧ ಅವಾಚ್ಯವಾಗಿ ಮಾತನಾಡಿರುವ ರಮೇಶ್ ಕತ್ತಿ ವಿರುದ್ಧ್ದ ಜಾತಿನಿಂದನೆ ಪ್ರಕರಣ ದಾಖಲು ಮಾಡಿ, ಕೂಡಲೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಾಲಿಗ್ರಾಮ ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಗಣೇಶ್, ಮುಖಂಡರಾದ ಮಧುವನಹಳ್ಳಿ ನಾಗರಾಜ್, ತಾಲೂಕು ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ತಿಪ್ಪೂರು ಮಹದೇವ, ಮುಖಂಡರಾದ ಶಿವಪ್ಪನಾಯಕ, ಅಡಗನಹಳ್ಳಿ ಪುಟ್ಟನಾಯಕ, ಎ.ಟಿ.ಶಿವಣ್ಣ, ತಂದ್ರೆ ವೆಂಕಟೇಶನಾಯಕ, ಭೈರನಾಯಕ, ಹೊಸೂರು ಕಲ್ಲಹಳ್ಳಿ ಗಿರಿನಾಯಕ, ಕುಚೇಲ ಇತರರು ಇದ್ದರು.