ಖಡಕ್ ಗಲ್ಲಿ ನೆಮ್ಮದಿ ಹಾಳು ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

6dvk 4
Published on

ವಿಜಯವಾಣಿ ಬೆಳಗಾವಿ

ಕಳೆದ ಶುಕ್ರವಾರ ಉರುಸ ಮೆರವಣಿಗೆ ವೇಳೆ ಖಡಕ್ ಗಲ್ಲಿಯಲ್ಲಿ ಉಂಟಾಗಿದ್ದ ಗಲಾಟೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಖಡಕ್ ಗಲ್ಲಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಖಡಕ ಗಲ್ಲಿ, ಭಡಕಲ್ ಗಲ್ಲಿ ಹಾಗೂ ಮಹಾತ್ಮ ಫುಲೆ ಚೌಕ್ ಮತ್ತು ಅಕ್ಕಪಕ್ಕದ ಗಲ್ಲಿಗಳ ನಿವಾಸಿಗಳು, ಪಂಚಮಂಡಳಿಗಳವರು ಸೋಮವಾರ ಶ್ರೀ ಯುವಕ ಮಂಡಳ ನೇತೃತ್ವದಲ್ಲಿ ಖಡಕಗಲ್ಲಿಯಿಂದ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯೆಲ್ಲಿ ತೆರಳಿ ಆಯುಕ್ತ ಭೂಷಣ ಬೊರಸೆಗೆ ಮನವಿ ಸಲ್ಲಿಸಿದರು.

ಶುಕ್ರವಾರದ ಘಟನೆಯಿಂದ ನಮ್ಮ ಗಲ್ಲಿಗಳ ನೆಮ್ಮದಿ ಹಾಳಾಗಿದೆ. ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದನ್ನು ದೂರ ಮಾಡುವ ಕೆಲಸ ಪೊಲೀಸರಿಂದಾಗಬೇಕು. ಉರುಸ ಮೆರವಣಿಗೆ ಪ್ರತಿ ವರ್ಷ ಜಾಲಗಾರಗಲ್ಲಿ ಮೂಲಕ ದರ್ಗಾಕ್ಕೆ ತೆರಳುತ್ತಿತ್ತು. ಈಗ ಅನುಮತಿ ಇಲ್ಲದೆ ಏಕಾಏಕಿಯಾಗಿ ಖಡಕ್‌ಗಲ್ಲಿಗೆ ಪ್ರವೇಶಿಸಿದ್ದಾರೆ. ಐ ಲವ್ ಮೊಹಮ್ಮದ್ ಹಾಗೂ ಹಮಸೆ ಜೋ ಟಕರಾಯೆಗಾ ಮಿಟ್ಟಿ ಮೆ ಮಿಲಜಾಯೇಗಾ ಎಂಬ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತ ಮನೆಗಳ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ ಮಾಡಿ ತಲ್ವಾರ್, ಲಾಠಿ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net