

ಕಾಸರಗೋಡು: ಕೇರಳದಲ್ಲಿ ಪೊಲೀಸರ ಧೋರಣೆ ಜನಸಾಮಾನ್ಯರ ಪಾಲಿಗೆ ಯಮಪಾಶವಾಗುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ರಂಜಿತ್ ಆರೋಪಿಸಿದರು.
ಪಿಣರಾಯಿ ವಿಜಯನ್ ಆಡಳಿತಾವಧಿಯಲ್ಲಿ ಪೊಲೀಸರ ದೌರ್ಜನ್ಯ ಖಂಡಿಸಿ ಹಾಗೂ ಪೊಲೀಸ್ ಪಡೆಯ ಸಮಗ್ರ ಪರಿವರ್ತನೆಗಾಗಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಸೋಮವಾರ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ಉದ್ಘಾಟಿಸಿ ಮಾತನಾಡಿದರು.
ಉದಯಗಿರಿಯಿಂದ ಎಸ್.ಪಿ. ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಉಪಾಧ್ಯಕ್ಷರಾದ ಪಿ.ರಮೇಶ್, ಮಣಿಕಂಠರಾಯ್, ಎಂ.ಬಾಲರಾಜ್, ಎಂ.ಜನನಿ, ಮುರಳೀಧರ್ ಯಾದವ್, ಎಂ.ಭಾಸ್ಕರನ್, ಕಾರ್ಯದರ್ಶಿಗಳಾದ ಎನ್.ಮಧು, ಮಹೇಶ್ ಗೋಪಾಲ್, ಪುಷ್ಪಾ ಗೋಪಾಲನ್, ಲೋಕೇಶ್ ನೋಂಡ, ಕೆ.ಎಂ.ಅಶ್ವಿನಿ, ಕೆ.ಟಿ.ಪುರುಷೋತ್ತಮನ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಸೆಲ್ ಸಂಯೋಜಕ ಸುಕುಮಾರ್ ಕುದುರೆಪಾಡಿ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯರ್, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಡಿ.ಭರತನ್, ಶಿಬು ಪಾಣತ್ತೂರ್, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷೆ ಕೆ.ಎಸ್.ರಮಣಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸುಕುಮಾರನ್ ಕಾಲಿಕಡವು, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಲ್ಸರಾಜ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ನಾರಾಯಣ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಮನುಲಾಲ್ ಮೇಲತ್ ಮತ್ತಿತರರಿದ್ದರು.