

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಹತ್ತು ವರ್ಷಗಳಿಗೂ ಹೆಚ್ಚು ಕಾಲ ಉಪ್ಪಳ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜೇಶ್ವರ ತಾಲೂಕು ಕಚೇರಿಗೆ ಹೊಸ ಕಟ್ಟಡ ನಿರ್ಮಿಸುವಂತೆ ಕೇರಳ ಎನ್ಜಿಒ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ.ಟಿ.ಶಶಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಜೇಶ್ವರ ತಾಲೂಕು ಕಚೇರಿಯ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಅಸೋಸಿಯೇಷನ್ ಮಂಜೇಶ್ವರ ಶಾಖೆ ಸಮಿತಿ ಆಯೋಜಿಸಿದ್ದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಉಪಾಧ್ಯಕ್ಷ ಒ.ಡಿ.ಜಯನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಅಸೋಸಿಯೇಷನ್ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಸಿ.ಸುಜಿತ್ಕುಮಾರ್, ಜಾಯ್ ಫ್ರಾನ್ಸಿಸ್, ಕೆ.ಅಬ್ದುಲ್ ಕರೀಂ, ಜಿಲ್ಲಾ ಖಜಾಂಚಿ ವಿ.ಎಂ.ರಾಜೇಶ್, ಗುರುರಾಜ್ ಮಾವುಂಗಲ್, ಕೆ.ಆರ್.ಪ್ರಮೋದ್, ಆರ್.ರಾಜೇಶ್, ಕೆ.ಇಂದಿರಾ, ಸಿ.ಚಾಂದನಿ, ಮುಹಮ್ಮದ್ ಹ್ಯಾರಿಸ್ ಧರಣಿ ನೇತೃತ್ವ ವಹಿಸಿದ್ದರು.
60ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ನಿರ್ವಹಿಸುವ ತಾಲೂಕು ಆಡಳಿತ ಕೇಂದ್ರದಲ್ಲಿ ನೀರು ಮತ್ತು ವಿದ್ಯುತ್ ಕೊರತೆ ಅನುಭವಿಸಬೇಕಾಗುತ್ತಿದೆ. ಎಲ್ಲ ಕಚೇರಿ ಕೆಲಸಗಳು ಡಿಜಿಟಲ್ ಆಗಿರುವ ಯುಗದಲ್ಲಿ ಪ್ರಸಕ್ತ ಕಚೇರಿಯಲ್ಲಿ ಇಂಟರ್ನೆಟ್ ಸಹ ಲಭ್ಯವಿಲ್ಲ. ತನ್ನ ವ್ಯಾಪ್ತಿಯಲ್ಲಿರುವ 8 ಪಂಚಾಯಿತಿಗಳನ್ನು ಒಳಗೊಂಡಿರುವ ತಾಲೂಕು ಕಚೇರಿಯು ಕೇವಲ ಒಂದು ವಾಹನವನ್ನು ಹೊಂದಿದೆ. ಮೂರನೇ ಮಹಡಿಯಲ್ಲಿರುವ ಕಚೇರಿಗೆ ಪ್ರವೇಶಿಸಲು ರ್ಯಾಂಪ್ ಇಲ್ಲದಿರುವುದು ಅಂಗವಿಕಲರು ಮತ್ತು ವೃದ್ಧರಿಗೆ ತೆರಳಲು ಕಷ್ಟಕರವಾಗಿದೆ. ಎ.ಟಿ.ಶಶಿ ಕೇರಳ ಎನ್ಜಿಒ ಅಸೋಸಿಯೇಷನ್ ಜಿಲ್ಲಾಧ್ಯಕ್ಷ https://www.vijayavani.net/drone-survey-at-veermala-hill https://www.vijayavani.net/16-crore-across-the-sector-costing-work