

ಕಿನ್ನಿಗೋಳಿ: ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚುತ್ತಿದೆ. ಕೇವಲ ಹಿಂದುಗಳನ್ನೇ ಗುರಿಯಾಗಿಸಿ ಕೊಲೆ ಮಾಡುತ್ತಿದ್ದಾರೆ. ದೇಶಭಕ್ತರಾದ ನಾವು ಇದನ್ನು ವಿರೋಧಿಸಬೇಕು. ಆದರೆ ಮುಸಲ್ಮಾನರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಭಾರತದಲ್ಲಿನ ಹೆಚ್ಚಿನ ಮುಸ್ಲಿಂರು ಕೂಡ ಇದಕ್ಕೆ ಬೆಂಬಲಿಸುತ್ತಾರೆ ಎನ್ನುವ ಭಾವನೆ ಇದೆ. ಇಂಥ ಪ್ರಕರಣಗಳಿಗೆ ಉಗ್ರ ಹೋರಾಟ ಮಾಡುವುದು ಅನಿವಾರ‌್ಯ. ಇಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಈಶ್ವರ್ ಕಟೀಲ್ ಹೇಳಿದರು.
ದೇಶಭಕ್ತ ನಾಗರಿಕರು ಕಿನ್ನಿಗೋಳಿ ವತಿಯಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಪಹಲ್ಗಾಮ್ ಘಟನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರಮುಖರಾದ ಸುನೀಲ್ ಆಳ್ವ ಮಾತನಾಡಿ, ಕಾಶ್ಮೀರದ ಘಟನೆ ನೋಡುವಾಗ ಹಿಂದುಗಳಿಗೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ ಎನ್ನುವುದು ಸ್ಪಷ್ಟ. ಭಯೋತ್ಪಾದಕರು ಹಿಂದುಗಳನ್ನೇ ಗುರಿಯಾಗಿಸಿದ್ದಾರೆ. ಇದಕ್ಕೆ ನಮ್ಮ ಕಾಂಗ್ರೆಸ್ ಮುಖಂಡರು ಸಾಥ್ ನೀಡುತ್ತಿದ್ದಾರೆ ಎನ್ನುವ ಭಾವನೆ ವ್ಯಕ್ತವಾಗಿದೆ ಎಂದರು.
ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ ಕಟೀಲು, ಗುರುರಾಜ್ ಮಲ್ಲಿಗೆಯಂಗಡಿ, ಕೇಶವ ಕರ್ಕೇರ, ಶೈಲೇಶ್ ಮೂಲ್ಕಿ, ಭಾಸ್ಕರ ಕೋಟ್ಯಾನ್ ಉಪಸ್ಥಿತರಿದ್ದರು.