ಮಹಿಳೆಯಿಂದ ಮೌನ ಪ್ರತಿಭಟನೆ, ಪೇದೆಯಿಂದ ದೌರ್ಜನ್ಯ ಆರೋಪ

19-klr-9
Published on

ಕೋಲಾರ: ಪತಿಯ ಕಿರುಕುಳ ಸಂಬಂಧ ದೂರು ನೀಡಲು ಹೋದ ತಮಗೆ ಸಹಾಯ ಮಾಡುವುದಾಗಿ ನಂಬಿಸಿ ಮನೆಗೆ ಬಂದ ಪೇದೆಯೊಬ್ಬರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸಪುರ ಪಟ್ಟಣದ ಡಿ.ಪಾರ್ವತಿ ನಗರದ ಗಾಂಧಿವನದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ಶ್ರೀನಿವಾಸಪುರ ಠಾಣೆ ಪೇದೆ ರವೀಂದ್ರ ಎಂಬುವವರು ದೂರು ಪಡೆದು ಸಹಾಯ ಮಾಡುವ ಭರವಸೆ ನೀಡಿದ್ದರು. ನಂತರ ಮನೆಗೆ ಬಂದು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

ಈ ಕುರಿತು ವಿಜಯವಾಣಿಯೊಂದಿಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸಪುರ ಸಿಪಿಐ ರಾಘವೇಂದ್ರ ಪ್ರಕಾಶ್, ಪೇದೆ ರವೀಂದ್ರ ದೌರ್ಜನ್ಯ ನಡೆಸಿದ್ದಾರೆಂದು ಪಾರ್ವತಿ ದೂರು ನೀಡಿದ್ದರು. ಈ ಸಂಬಂಧ ಡಿವೈಎಸ್ಪಿ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ತಗಾದೆ ಇರುವುದು ಗೊತ್ತಾಯಿತು. ಠಾಣೆಯಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಂಡ ಪಾರ್ವತಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈಗ ಪ್ರತಿಭಟನೆ ನಡೆಸಿದ್ದು, ಮೇಲಧಿಕಾರಿ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net