

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಪ್ರತಿ 1000 ಬೀಡಿಗೆ ಸಿಗಬೇಕಿದ್ದ 331 ರೂ. ಕೂಲಿಯನ್ನು 270 ರೂ.ಗೆ ಇಳಿಕೆ ಮಾಡಿದ ಸರ್ಕಾರದ ಆದೇಶವನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ ಎಂದು ದ.ಕ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು)ನ ಉಪಾಧ್ಯಕ್ಷ ಬಿ.ಎಂ.ಭಟ್ ಹೇಳಿದರು.
ಬೀಡಿ ಕಾರ್ಮಿಕರ ವೇತನ ಕಡಿತ ಮತ್ತು ವೇತನ ಬಾಕಿ ವಿರುದ್ಧ ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಕಾವಳಪಡೂರು ಗ್ರಾಮ ಪಂಚಾಯಿತಿ ಮುಂದೆ ಇತ್ತೀಚೆಗೆ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಕೆ.ಯಾಧವ ಶೆಟ್ಟಿ ಮಾತನಾಡಿದರು. ಈಶ್ವರಿ ಪದ್ಮುಂಜ ಪ್ರಸ್ತಾವನೆಗೈದರು. ರಾದಚಂದ್ರ ಪೂಜಾರಿ ಸ್ವಾಗತಿಸಿದರು. ಲೋಲಾಕ್ಷಿ ವಂದಿಸಿದರು. ಇಬ್ರಾಹಿಂ ಖಲೀಲ್, ರಹಮತ್ ಆಲಿ, ಸಮಾಜ ಸೇವಕ ಗೋಪಾಲ ಟೈಲರ್ ಪಾಲ್ಗೊಂಡಿದ್ದರು.
ರಾಜ್ಯದ ಶಾಸಕರು, ಮಂತ್ರಿಗಳು ತಮ್ಮ ಸಂಬಳವನ್ನಷ್ಟೇ ಹೆಚ್ಚಿಸಿಕೊಂಡಿದ್ದು, ಯಾವುದೇ ಪಕ್ಷದ ನಾಯಕರು, ಶಾಸಕರು ಬೀಡಿ ಕಾರ್ಮಿಕ ಪರ ಸದನದಲ್ಲಿ ಧ್ವನಿ ಎತ್ತಿಲ್ಲ. ಬೀಡಿ ಕಾರ್ಮಿಕರಿಗೆ ವೇತನ ಏರಿಕೆಯಾಗಿಲ್ಲ. ಪ್ರತಿ ಅಂಶದ ತುಟ್ಟಿಭತ್ತೆಯನ್ನೂ 4 ಪೈಸೆಯಿಂದ 3 ಪೈಸೆಗೆ ಇಳಿಸಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ. ಬಿ.ಎಂ.ಭಟ್ ಸಿಐಟಿಯು ಉಪಾಧ್ಯಕ್ಷ https://www.vijayavani.net/blood-camp-16 https://www.vijayavani.net/blood-camp-16