ದೇಹಕ್ಕೆ ಪ್ರೋಟೀನ್‌ಯುಕ್ತ ಆಹಾರ ಅವಶ್ಯಕ

6Anand3
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾದ ಜಪಾನ್‌ನ ಡಾ.ಮಸಾಕಿ ಹೊರಿತಾನಿ ಅವರನ್ನು ಪ್ರಾಚಾರ್ಯ ಡಾ. ಜ್ಯೋತಿ ಕವಳೇಕರ ಸ್ವಾಗತಿಸಿಕೊಂಡರು. ಡಾ.ಗಂಗಾಧರ ಬಬಲಾದಿಮಠ ,ಡಾ. ಪ್ರವೀಣ ದೇವಗಡ, ಸಾಕ್ಷಿ ಪಾಟೀಲ ಇದ್ದರು.
Published on

ಬೆಳಗಾವಿ: ದೇಹದ ನಾನಾ ಕಾರ್ಯಗಳಿಗೆ ಸಂಬಂಧಪಟ್ಟ ರಾಸಾಯನಿಕ ಕ್ರಿಯೆಗಳು ದೇಹದಲ್ಲಿ ನಡೆಯುವಾಗ ಅವುಗಳಿಗೆ ವೇಗವರ್ಧಕಗಳಂತೆ ಕಿಣ್ವುಗಳು (ಪ್ರೋಟೀನ್‌ಗಳು) ಕೆಲಸ ಮಾಡುತ್ತವೆ. ಆದ್ದರಿಂದ ದೇಹಕ್ಕೆ ಹೆಚ್ಚು ಹೆಚ್ಚು ಪ್ರೋಟೀನ್‌ಯುಕ್ತ ಆಹಾರ ಅವಶ್ಯಕವಾಗಿದೆ ಎಂದು ಜಪಾನ್‌ನ ಸಾಗಾ ವಿಶ್ವವಿದ್ಯಾಲಯದ ಅನ್ವಯಿಕ ಜೀವರಸಾಯನಶಾಸ ಮತ್ತು ಆಹಾರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಸಾಕಿ ಹೊರಿತಾನಿ ಹೇಳಿದರು.

ನಗರ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ರಸಾಯನಶಾಸ ಮತ್ತು ಭೌತಶಾಸ ವಿಭಾಗಗಳ ಸಹಯೋಗದಲ್ಲಿ ಈಚೆಗೆ ಎಲೆಕ್ಟ್ರೋಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿಯಿಂದ ಬಹಿರಂಗಗೊಂಡ ಪರಿಣಾಮಕಾರಿ ವೇಗವರ್ಧನೆಗಾಗಿ ಮೆಟಾಲೊ ಕಿಣ್ವದ ರಚನಾತ್ಮಕ ಮರುಜೋಡಣೆಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿ ಜೀವರಾಸಾಯನಿಕ ಕಾರ್ಯವಿಧಾನದಲ್ಲಿ ಮೆಟಾಲೊ ಕಿಣ್ವದ ಬಳಕೆಯ ಕುರಿತು ವಿವರಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಗುರುಬಸವರಾಜ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜ್ಯೋತಿ ಕವಳೇಕರ ಮಾತನಾಡಿದರು.

ರಸಾಯನಶಾಸ ವಿಭಾಗದ ಸಂಯೋಜಕ ಡಾ.ಗಂಗಾಧರ ಬಬಲಾದಿಮಠ, ಡಾ.ಪ್ರವೀಣ ದೇವಗಡ, ಸಾಕ್ಷಿ ಪಾಟೀಲ, ವೈಷ್ಣವಿ ಕರೇಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net