ಸಜ್ಜನರ ಬದಲು ದುರ್ಜನರ ರಕ್ಷಣೆ

12 ckm 1 c.t.ravi
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು.
Published on

ಚಿಕ್ಕಮಗಳೂರು: ನಾಡಹಬ್ಬ ದಸರಾದ ಉz್ದೆÃಶವೇ ಸಜ್ಜನರ ರಕ್ಷಣೆ ದುರ್ಜನರ ಸಂಹಾರ. ಆದರೆ ದಸರಾ ಸಂದರ್ಭದಲ್ಲಿಯೇ ಕಾಂಗ್ರೆಸ್ ಸರ್ಕಾರ ಕೋಮುಗಲಭೆ ಹುಟ್ಟು ಹಾಕಲು ಯತ್ನಿಸಿದವರ ವಿರುದ್ಧದ ಮೊಕ್ಕದ್ದಮೆಗಳನ್ನು ವಾಪಸ್ಸು ಪಡೆಯುವ ಮೂಲಕ ರಾಷ್ಟçಘಾತುಕ ನಿರ್ಣಯ ಕೈಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಣಯದ ಮರು ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಕೋರ್ ಕಮಿಟಿ ಮತ್ತು ರಾಜ್ಯಾಧ್ಯಕ್ಷರ ಜೊತೆಗೆ ಚರ್ಚೆ ಮಾಡಿ ಹುಬ್ಬಳ್ಳಿ ಚಲೋ ಚಳವಳಿಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋಮು ಗಲಭೆಗೆ ಯಾರು ಕಾರಣಕರ್ತರಾಗಿದ್ದರೋ ಅವರ ವಿರುದ್ಧದ ಮೊಕ್ಕದ್ದಮೆಗಳನ್ನು ಕ್ಯಾಬಿನೆಟ್ ನಲ್ಲಿ ವಾಪಸ್ ಪಡೆದಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಬಂದವರು, ಆಂಜನೇಯ ಸ್ವಾಮಿ ದೇವಾಲಯದ ಮೇಲೆ ಕಲ್ಲುತೂರಾಟ ನಡೆಸಿದವರು ಕನ್ನಡಪರ ಹೋರಾಟಗಾರರೇ ಅಥವಾ ರೈತ ಹೋರಾಟಗಾರರೇ ಎಂದು ಪ್ರಶ್ನಿಸಿದರು.
ಕೋಮು ಗಲಭೆಗೆ ಯತ್ನಿಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ಸು ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ದಸರಾ ಸಂದರ್ಭದಲ್ಲಿಯೇ ದುಷ್ಟರ ರಕ್ಷಣೆಗೆ ನಿಂತಿರುವುದು ವಿಪರ್ಯಾಸವಾಗಿದೆ ಎಂದರು.
ನಾಡ ಹಬ್ಬ ದಸರಾ ಗೆ ಅದರz್ದÉÃ ಆದ ಗೌರವವಿದೆ. ಆದರೆ ಕಾಂಗ್ರೆಸ್ ಸರ್ಕಾರ ದಸರಾ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದೆ. ಎಲ್ಲಿ ರಾಜಕಾರಣ ಮಾಡಬೇಕು ಎಲ್ಲಿ ಮಾಡಬಾರದು ಎನ್ನುವ ಕನಿಷ್ಠ ಪರಿಜ್ಞಾನವೂ ಕಾಂಗ್ರೆಸ್ ನಾಯಕರಿಗೆ ಇಲ್ಲವಾಗಿದೆ ಎಂದು ಹರಿಹಾಯ್ದರು.
ನಾಡಹಬ್ಬ ದಸರಾ ಉದ್ಘಾಟನೆ ವೇಳೆ ಚಾಮುಂಡಿ ಬೆಟ್ಟದಲ್ಲಿ ನಾಡ ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡಲಿಲ್ಲ. ಇದರ ಬದಲು ರಾಜಕಾರಣ ಮಾತನಾಡಲು ವೇದಿಕೆಯನ್ನು ಬಳಸಿಕೊಂಡರು. ನಾಡಹಬ್ಬ ದಸರಾದಲ್ಲಿ ಚಾಮುಂಡೇಶ್ವರಿ ಗುಣಗಾನ, ಮೈಸೂರು ಮಹಾರಾಜರ ಕೊಡುಗೆ ಸ್ಮರಿಸುವ ಕೆಲಸ ಮಾಡಬೇಕಿತ್ತು. ಆದರೆ ಇದಾವುದನ್ನು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಾದ ಬಳಿಕ ಸರ್ಕಾರಿ ದುಡ್ಡಲ್ಲಿ ಜಾಹೀರಾತನ್ನು ನೀಡಿದ್ದಾರೆ. ಆದರೆ ತಾವು ನೀಡಿರುವ ಜಾಹೀರಾತಿನಂತೆಯೇ ನಡೆದುಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ದಸರಾ ಸಂದರ್ಭದಲ್ಲಿಯೇ ಸಜ್ಜನರ ರಕ್ಷಣೆ ಬದಲು ದುರ್ಜನರ ರಕ್ಷಣೆಗೆ ಮುಂದಾಗುವ ಮೂಲಕ ತಮ್ಮ ಇಬ್ಬಗೆ ನೀತಿ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಎಫ್‌ಡಿಪಿಐ ಹಾಗೂ ಪಿಎಫ್‌ಐನ ಎರಡು ಸಾವಿರಕ್ಕೂ ಅಧಿಕ ಜನರ ವಿರುದ್ಧದ ಪ್ರಕರಣ ವಾಪಸ್ ಪಡೆದಿದ್ದರು. ಇದರ ಪರಿಣಾಮವಾಗಿ ರಾಜು ಹತ್ಯೆ, ರುದ್ರೇಶ್ ಹತ್ಯೆ ಸೇರಿದಂತೆ ಸರಣಿ ಕೊಲೆಗಳು ನಡೆದಿದ್ದವು. ಮತ್ತೆ ಕರ್ನಾಟಕದಲ್ಲಿ ಸರಣಿ ಹತ್ಯೆ ಪ್ರಕರಣಗಳನ್ನು ಪುನರ್ ಸ್ಥಾಪಿಸುವ ಉz್ದÉÃಶದಿಂದ ದುಷ್ಟರ ಮೇಲಿದ್ದ ಮೊಕ್ಕದ್ದಮೆಗಳನ್ನು ವಾಪಸು ಪಡೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಬಾಗೇಪಲ್ಲಿಯಲ್ಲಿ ಯಾವುದೇ ಪ್ರಕರಣವಿಲ್ಲ
ವೇಳೆ ಸಿ.ಟಿ.ರವಿ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆದಿz್ದÉÃವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಬಾಗೇಪಲ್ಲಿಯಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣವು ದಾಖಲಾಗಿರಲಿಲ್ಲ. ಆದರೆ ಸರ್ಕಾರ ತಪ್ಪು ಮಾಹಿತಿ ನೀಡಿದೆ. ನಾನು ಎಂದೂ ನನ್ನ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆ ವೇಳೆ ನನ್ನ ಟ್ವೀಟ್ ಆಧರಿಸಿ ನಾಲ್ಕು ಕೇಸುಗಳನ್ನು ಹಾಕಿದ್ದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವಂತೆ ನಾನೇನು ಟ್ವೀಟ್ ಮಾಡಿರಲಿಲ್ಲ. ಆದರೂ ದೂರು ದಾಖಲು ಮಾಡಲಾಗಿತ್ತು. ಈ ಪ್ರಕರಣಗಳಿಗೆ ನಾನು ಹೈಕೋರ್ಟ್ ನಿಂದ ಸ್ಟೇ ತಂದಿz್ದÉÃನೆ. ಇವುಗಳ ಹೊರತು ನನ್ನ ಮೇಲೆ ಬೇರೆ ಯಾವುದೇ ಪ್ರಕರಣಗಳಿಲ್ಲ. ಆದರೆ ಸರ್ಕಾರ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೋಲಾರದಲ್ಲಿ ರೈತರ ಮೇಲೆ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವAತೆ ಅರ್ಜಿ ಸಲ್ಲಿಸಿದ್ದೆ. ಆದರೆ ನನ್ನ ಮೇಲಿನ ಪ್ರಕರಣ ಹಿಂಪಡೆಯಿರಿ ಎಂದು ಎಂದೂ ಅರ್ಜಿ ಸಲ್ಲಿಸಿಲ್ಲ. ರೈತರ ವಿರುದ್ಧ ದಾಖಲಾಗಿದ್ದ ಕೇಸು ಹಿಂಪಡೆಯಿರಿ ಎಂದು ಸಲ್ಲಿಸಿದ ಅರ್ಜಿ ಇಂದು ಸರ್ಕಾರದ ಮುಂದಿರಬಹುದು. ಸರ್ಕಾರ ಎಂದೂ ರಾಷ್ಟçಘಾತಕ ಶಕ್ತಿಗಳ ಜೊತೆಗೆ ನನ್ನ ಹೆಸರನ್ನು ಜೋಡಿಸಬಾರದು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net