ಗ್ರಾಮಠಾಣಾ ಜಾಗ ರಕ್ಷಣೆ ಹದ್ದುಬಸ್ತು

13=.kkr2(1-24
ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಅತೀಕ್ರಮಣ ಪ್ರವೇಶ ಮಾಡಿದ್ದ ವ್ಯಕ್ತಿಗೆ ತಿಳಿವಳಿಕೆ ನೀಡಿ, ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು ಹದ್ದುಬಸ್ತು ಮಾಡಿದರು. ಹಾಕಿಸಿದರು.
Published on

ಕಿಕ್ಕೇರಿ: ಹೋಬಳಿಯ ಆನೆಗೊಳ ಗ್ರಾಮ ಪಂಚಾಯಿತಿಗೆ ಸೇರಿದ ವಿವಾದಿತ ಗ್ರಾಮಠಾಣಾ ಜಾಗದಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಭತ್ತದ ಹುಲ್ಲಿನ ಕಂತೆಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಪಿಡಿಒ ರವಿಕುಮಾರ್ ಮಂಗಳವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜಾಗ ಅಳತೆ ಮಾಡಿಸಿ, ಅತೀಕ್ರಮ ಪ್ರವೇಶ ಮಾಡದಂತೆ ಸೂಚನೆ ನೀಡಿದರು.

ಗ್ರಾಮಠಾಣಾ ಜಾಗದಲ್ಲಿ ಕಳೆದ ವಾರ ರಾತ್ರಿ ವೇಳೆಯಲ್ಲಿ ಗ್ರಾಮದ ಎ.ಎನ್.ನಾಗೇಂದ್ರಪ್ಪ ಹುಲ್ಲಿನ ಕಂತೆ ಹಾಕಿ ತಮ್ಮ ಜಾಗವೆಂದು ಹಕ್ಕು ಸಾಧಿಸಲು ಯತ್ನಿಸಿದ್ದರು. ಸರ್ಕಾರಿ ಜಾಗ ಉಳಿಸುವಂತೆ ಹಲವರು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಪಿಡಿಒ ಅಳತೆ ಮಾಡಿಸಿದ್ದಾರೆ. ಸರ್ಕಾರಿ ಜಾಗ ಅಂಗನವಾಡಿ ಕೇಂದ್ರ, ಪಶು ಆಸ್ಪತ್ರೆ ಸೇರಿದಂತೆ ಇತರ ಸರ್ಕಾರಿ ಕಟ್ಟಡ ನಿರ್ಮಿಸಲು ಮೀಸಲಾಗಿದ್ದು, ದುರ್ಬಳಕೆಗೆ ಅವಕಾಶವಿಲ್ಲ ಎಂದು ತಿಳಿವಳಿಕೆ ನೀಡಿ ಹದ್ದುಬಸ್ತು ಮಾಡಲಾಗಿದೆ.

ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ ವಿಶ್ವನಾಥ್, ಉಪಾಧ್ಯಕ್ಷ ನಂಜೇಶ್, ಪಿಡಿಒ ರವಿಕುಮಾರ್, ತಾಪಂ ಸಹಾಯಕ ನಿರ್ದೇಶಕ ನರಸಿಂಹರಾಜು, ಕೆ.ಆರ್.ಪೇಟೆ ಇನ್‌ಸ್ಪೆಕ್ಟರ್ ಸುಮಾರಾಣಿ, ಪಿಎಸ್‌ಐ ಶಿವಲಿಂಗಪ್ಪ, ಕೇಶವಪ್ರಸಾದ್, ಕಾರ್ಯದರ್ಶಿ ನವೀನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net