ನಾಯಿಗೂಡಿನಲ್ಲಿ ಕಾಣಿಸಿಕೊಂಡ ಹಾವು ರಕ್ಷಣೆ

ಚಿತ್ರ 31ಎಸ್ ಡಿ ಪಿ 03
Published on

ಸಿದ್ದಾಪುರ: ಇಲ್ಲಿನ ಗುಹ್ಯ ಏಂಜಲ್ ಫೀಡ್ ಎಸ್ಟೇಟ್ ಜ್ಯೋತಿ ಪೊನ್ನಪ್ಪ ಅವರ ಲೈನ್‌ಮನೆಯಲ್ಲಿ ನಾಯಿಗೂಡಿನಲ್ಲಿ ಮಂಗಳವಾರ ಹಾವೊಂದು ಪ್ರತ್ಯಕ್ಷವಾಗಿದೆ.

ಕೂಡಲೇ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತು. ಸುರೇಶ್ ಸ್ಥಳಕ್ಕೆ ಭೇಟಿ ನೀಡಿ 2 ಅಡಿ ಉದ್ದದ ನಾಗರಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಮಾಲ್ತಾರೆ ಅರಣ್ಯಕ್ಕೆ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net