ಬೈಕ್‌ಗೆ ಅಡ್ಡ ಬಂದ ಜಿಂಕೆ ಮರಿ ರಕ್ಷಣೆ

24 anr 24
ಹುಬ್ಬನಹಳ್ಳಿ ಗ್ರಾಮದಲ್ಲಿ ಜಿಂಕೆಮರಿ ರಕ್ಷಿಸಿದ ಈರಪ್ಪ.
Published on

ಆಯನೂರು: ಸಮೀಪದ ಹುಬ್ಬನಹಳ್ಳಿಯಲ್ಲಿ ಶನಿವಾರ ಬೆಳಗ್ಗೆ ಗ್ರಾಮದ ಈರಪ್ಪ ಎಂಬುವರು ಬೈಕಿನಲ್ಲಿ ಕುಂಸಿಗೆ ಹೋಗುವಾಗ ಆರು ತಿಂಗಳ ಗಂಡು ಜಿಂಕೆ ಮರಿ ಅಡ್ಡ ಬಂದಿದೆ. ಈ ವೇಳೆ ಬೀದಿನಾಯಿಗಳು ಜಿಂಕೆಯನ್ನು ಬೆನ್ನಟ್ಟಿರುವುದನ್ನು ಕಂಡಿದ್ದಾರೆ. ತಕ್ಷಣ ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ. ಬಳಿಕ ಜಿಂಕೆಯನ್ನು ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಹಾರನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗಂಡು ಜಿಂಕೆ ಮರಿಯೊಂದು ನೀರಿಗಾಗಿ ಹುಡುಕಾಡುತ್ತಾ ಕಾಡಿನಿಂದ ಗ್ರಾಮಕ್ಕೆ ಆಗಮಿಸಿದ್ದು ಈ ವೇಳೆ ಗ್ರಾಮದ ನಾಯಿಗಳು ಜಿಂಕೆಮರಿಯನ್ನು ಬೆನ್ನಟ್ಟಿವೆ. ನಿತ್ರಾಣ ಗೊಂಡ ಜಿಂಕೆಮರಿಯನ್ನು ಈರಪ್ಪ ಎಂಬುವರು ರಕ್ಷಿಸಿದ್ದಾರೆ. ಜಿಂಕೆಮರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಪುನಃ ಕಾಡಿಗೆ ಬಿಟ್ಟು ಬರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯನೂರು ವಲಯ ಅರಣ್ಯಾಧಿಕಾರಿ ಗೀತಾ ನಾಯ್ಕ್, ಹಾರನಹಳ್ಳಿ ಡಿಆರ್‌ಎಫ್‌ಒ ಸಂತೋಷ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net