ಖನಿಜಯುಕ್ತ ಆಹಾರ ಸೇವನೆಯಿಂದ ಹಲ್ಲುಗಳ ರಕ್ಷಣೆ

ಚನ್ನರಾಯಪಟ್ಟಣದ ಶಾಲಿನಿ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ತಜ್ಞ ವೈದ್ಯರು ದಂತ ತಪಾಸಣೆ ಮಾಡಿದರು. ಲಾಯರ್ ವಿಜಯ್, ಖಜಾಂಚಿ ಡಿ.ಕೆ.ಮಂಜುನಾಥ್, ಕಾರ್ಯದರ್ಶಿ ಗೋವಿಂದೇಗೌಡ, ಡಾ.ಜಮೀರ್, ಡಾ.ರಂಜಿತಾ ಸಿಂಗ್, ಡಾ.ಕವಿತಾ ನಂದೀಶ್, ಡಾ.ಪ್ರಭುದೇವ್, ಡಾ. ಕುಮುದಾ ಇತರರಿದ್ದರು.
ಚನ್ನರಾಯಪಟ್ಟಣದ ಶಾಲಿನಿ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ತಜ್ಞ ವೈದ್ಯರು ದಂತ ತಪಾಸಣೆ ಮಾಡಿದರು. ಲಾಯರ್ ವಿಜಯ್, ಖಜಾಂಚಿ ಡಿ.ಕೆ.ಮಂಜುನಾಥ್, ಕಾರ್ಯದರ್ಶಿ ಗೋವಿಂದೇಗೌಡ, ಡಾ.ಜಮೀರ್, ಡಾ.ರಂಜಿತಾ ಸಿಂಗ್, ಡಾ.ಕವಿತಾ ನಂದೀಶ್, ಡಾ.ಪ್ರಭುದೇವ್, ಡಾ. ಕುಮುದಾ ಇತರರಿದ್ದರು.
Published on

ಚನ್ನರಾಯಪಟ್ಟಣ: ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು.

ಚನ್ನರಾಯಪಟ್ಟಣ ಮತ್ತು ಬಾಗೂರು ಲಯನ್ಸ್ ಸೇವಾ ಸಂಸ್ಥೆ, ರೋಟರಿ ಸೇವಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪಟ್ಟಣದ ಶಾಲಿನಿ ವಿದ್ಯಾ ಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ದಂತ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂರನೇ ಒಂದು ಭಾಗದ ಮಕ್ಕಳಿಗೆ ಹುಳುಕು ಹಲ್ಲಿನ ಸಮಸ್ಯೆಯಿದೆ. ಮಕ್ಕಳು ಚಿಕ್ಕವಯಸ್ಸಿನಿಂದಲೇ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಲಯನ್ ಗಿರೀಶ್ ಮಾತನಾಡಿ, ಈಗಿನ ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿತಿನಿಸು, ಬೇಕರಿ ತಿನಿಸು ಮುಂತಾದ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಬೇಗ ಹಲ್ಲುಗಳು ಹಾಳಾಗುತ್ತಿವೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ದಂತ ತಪಾಸಣೆ ಮಾಡುವುದರ ಜತೆಗೆ ಪೇಸ್ಟ್ ಮತ್ತು ಬ್ರಷ್ ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ಲಾಯರ್ ವಿಜಯ್, ಖಜಾಂಚಿ ಡಿ.ಕೆ.ಮಂಜುನಾಥ್, ಕಾರ್ಯದರ್ಶಿ ಗೋವಿಂದೇಗೌಡ, ಡಾ.ಜಮೀರ್, ಡಾ.ರಂಜಿತಾ ಸಿಂಗ್, ಡಾ.ಕವಿತಾ ನಂದೀಶ್, ಡಾ.ಪ್ರಭುದೇವ್, ಡಾ. ಕುಮುದಾ ಇತರರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net