ಧರ್ಮದ ರಕ್ಷಣೆ ನಮ್ಮ ಕರ್ತವ್ಯ: ವಾಸುದೇವ ತಂತ್ರಿ ಅಭಿಪ್ರಾಯ

Ism_Religion-Protection
Published on

ಪುತ್ತೂರು ಗ್ರಾಮಾಂತರ: ಇಂದು ಧರ್ಮ ರಕ್ಷಣೆಗೆ ಕ್ಲಿಷ್ಟಕರ ವಾತಾವರಣ ನಿರ್ಮಾಣವಾಗುತ್ತಿದೆ. ಮಾನಸಿಕ ದೃಢತೆ, ಜ್ಞಾನ, ದೈಹಿಕ ಸಾಮರ್ಥ್ಯ ನಮಗೆ ಬೇಕು. ಇಲ್ಲದಿದ್ದರೆ ನಮ್ಮ ಧಾರ್ಮಿಕ ಪ್ರಜ್ಞೆ ಸಂರಕ್ಷಿಸಿಕೊಳ್ಳಲು ಕಷ್ಟವಾಗಬಹುದು, ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆ, ಧರ್ಮ ರಕ್ಷಣೆ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಕುಂಟಾರು ವಾಸುದೇವ ತಂತ್ರಿ ಹೇಳಿದರು.

ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಪೂಜಾ ಸಮಿತಿ ಅಧ್ಯಕ್ಷೆ ರೋಹಿಣಿ ಶಿವರಾಮ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ, ಮೆಸ್ಕಾಂ ಇಲಾಖೆ ಕಿರಿಯ ಇಂಜಿನಿಯರ್ ರಮೇಶ್ ಗೌಡ, ನಾಗರಾಜ್ ಭಟ್, ಪೂಜಾ ಸಮಿತಿ ಗೌರವಾಧ್ಯಕ್ಷೆ ವಿನೋದಾ ಜಯರಾಮ್, ಖಜಾಂಜಿ ಕೋಮಲ ಕೃಷ್ಣಪ್ಪ ಗೌಡ ನೀರಳಿಕೆ, ಸಮತಾ ಪಿ.ಪುಳಿಮರಡ್ಕ, ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಪೂಜಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ.ನಾಗಪ್ಪಯ್ಯ ಪ್ರಸ್ತಾವಿಸಿದರು. ಪೂಜಾ ಸಮಿತಿ ಸ್ಥಾಪಕಾಧ್ಯಕ್ಷೆ ಅಮಿತಾ ಸೀತಾರಾಮ ಮನೋಳಿತ್ತಾಯ ಪಂಚೋಡಿ ಸ್ವಾಗತಿಸಿ. ಕಾರ್ಯದರ್ಶಿ ದೇವಿಪ್ರಶಾಂತಿ ವಿಶ್ವನಾಥ್ ಗೌಡ ಅಡ್ಡಂತ್ತಡ್ಕ ವಂದಿಸಿ. ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ ಮತ್ತು ಗಾಯತ್ರಿ ಚಂದ್ರಶೇಖರ್ ನಿರೂಪಿಸಿದರು.

ಸಾಧಕರಿಗೆ ಗೌರವ

ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಪ್ರಣ್ವಿಕಾ ರೈ ಮುನ್ನಗದ್ದೆ, ವಿದ್ಯಾರ್ಥಿನಿ ಚಿಂತನಾ ಎ.ಆರ್., ಘನತ್ಯಾಜ್ಯ ವಿಲೇವಾರಿ ಘಟಕದ ವಾಹನ ಚಾಲಕಿ ಶ್ರೀಮತಿ, ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ, ಮೆಸ್ಕಾಂನ ಕಿರಿಯ ಇಂಜಿನಿಯರ್ ರಮೇಶ್ ಗೌಡ ಕೆ., ಮೆಸ್ಕಾಂನ ಮೆಕಾನಿಕ್ ನಾಗೇಶ್ ಕೆ.ಎಸ್., ಪವರ್‌ಮನ್‌ಗಳಾದ ಗಂಗಾಧರ್ ಬಿ., ದಿಲೇಶ್ ಎಸ್., ಪಾಂಡಪ್ಪ ದೊಡ್ಡಮನಿ, ಸಹಾಯಕ ಮಾರ್ಗದಾಳು ಕಿರಣ್ ಆರ್., ಕಿರಿಯ ಮಾರ್ಗದಾಳುಗಳಾದ ರಫೀಕ್ ಅಕ್ಕೋಜಿ, ಸಂಪತ್ ಆರ್., ದರ್ಶನ್ ಹಿಪ್ಪರಗಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net