ಸ್ಮಾರಕಗಳ ರಕ್ಷಣೆ ಅವಶ್ಯಕ

Oplus_0
Oplus_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮನಾಡಿನಲ್ಲಿರುವ ಅನೇಕ ಸ್ಮಾರಕಗಳು, ದೇವಾಲಯಗಳು, ಗುಹೆಗಳು, ಮಸೀದಿ, ಚರ್ಚ್, ಶಾಸನಗಳು ನಮ್ಮ ಪರಂಪರೆ ಪ್ರತಿಬಿಂಬಿಸುತ್ತವೆ. ಅವುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮಮೇಲಿದೆ ಎಂದು ಇತಿಹಾಸ ತಜ್ಞ ಡಾ ಎಂ.ವೈ. ಸಾವಂತ್ ಅಭಿಪ್ರಾಯಪಟ್ಟರು.
ನಗರದ ಕೆ. ಇ. ಬೋರ್ಡ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸ್ಇ, ಇತಿಹಾಸ ವಿಭಾಗ ಹಾಗೂ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಪರಂಪರೆಯ ಸಂರಕ್ಷಣೆ: ಮಹತ್ವ ಮತ್ತು ಅವಶ್ಯಕತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಕಾರ್ಯಾಧ್ಯಕ್ಷ ಡಾ. ಗಿರಿಧರ್ ಕಿನ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಪರಂಪರೆ ಹಾಗೂ ನಮ್ಮ ಪೂರ್ವಜರನ್ನು ಮರೆತರೆ ನಮ್ಮ ಇತಿಹಾಸ ಮರೆತಂತೆ. ಪೂರ್ವಜರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ಧಾಂತಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕು ಎಂದರು.
ಡಾ ಸುರೇಶ್ ಹಾನಗಲ್, ಕೆ. ಎಸ್. ಮಡಿವಾಳರ್, ಶಿವಾನಂದ್ ಗಾಯಕ್ವಾಡ್, ಮಧುಮತಿ ಶಿವಪೂಜಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net