

ಮೊಳಕಾಲ್ಮೂರು: ಮಳೆ ಕೊರತೆ ಹಿನ್ನೆಲೆಯಲ್ಲಿ ಬರಿದಾಗುತ್ತಿರುವ ಕೆರೆ, ಕಟ್ಟೆ, ಬಾವಿಗಳ ರಕ್ಷಣೆಗೆ ಸರ್ವರ ಹೊಣೆಗಾರಿಕೆ ಆಗಿದ್ದು, ಇಲಾಖೆ ಸೂಚಿಸಿದ ಜಾಗದಲ್ಲಿಯೇ ಗಣಪತಿ ಮೂರ್ತಿ ವಿಸರ್ಜನೆಗೆ ಮುಂದಾಗಬೇಕು ಎಂದು ಸಿಪಿಐ ವಸಂತ ವಿ.ಅಸೋದೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಪರಂಪರೆ ವಿಜೃಂಭಣೆ ಜತೆಗೆ ಶಾಂತಿಯುತವಾಗಿರಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜತೆಗೆ ಕೈಜೋಡಿಸಬೇಕು. ಉಲ್ಲಂಘಿಸಿದರೆ ಕ್ರಮ ಖಚಿತ ಎಂದರು.
ಪಿಎಸ್‌ಐ ಪಾಂಡುರಂಗಪ್ಪ, ಕ್ರೈಂ ಪಿಎಸ್‌ಐ ವೀರೇಶ್, ತಾಪಂ ಇಒ ಎಂ.ಆರ್.ಪ್ರಕಾಶ್, ವ್ಯವಸ್ಥಾಪಕ ನಂದೀಶ್, ಶಿರಸ್ತೇದಾರ ಅಂಜಿನಪ್ಪ, ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ಬೆಸ್ಕಾಂ ಅಧಿಕಾರಿಗಳಾದ ಶಿವಪ್ರಸಾದ್, ಕೃಷ್ಣಪ್ಪ, ಮುಂಖಡರಾದ ಚಂದ್ರಶೇಖರ ಗೌಡ್ರು, ವಿ.ಮಾರನಾಯಕ, ವೆಂಕಟೇಶ್, ವಿನಯ್, ಗೋಪಾಲ, ಆನಂದ್, ಲಕ್ಷ್ಮಣ, ಮೂರ್ತಿ, ರಾಮಾಂಜಿನೇಯ ಇದ್ದರು.