

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಪರಿಸರ ಶುದ್ಧತೆ ಉಳಿಸಿಕೊಳ್ಳುವುದು ನಾಗರಿಕರಾದ ನಮ್ಮಲ್ಲರ ಬದ್ಧತೆಯಾಗಿದೆ. ಮಕ್ಕಳಲ್ಲಿಯೂ ಈ ಬಗ್ಗೆ ಸಂಸ್ಕಾರ ಮೂಡಿಸಬೇಕು ಎಂದು ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಅನಿತಾ ಎಚ್.ಡಿ. ಹೇಳಿದರು.
ಹಳೆಯಂಗಡಿ ಭಾರತದ ಕಾನೂನು ನೆರವು ಕೇಂದ್ರ ಹಾಗೂ ಮೂಲ್ಕಿ ವಿಜಯ ಕಾಲೇಜು, ಹಳೆಯಂಗಡಿ ವಿಜಯ ವಾಸ್ಟರ್ ಟ್ರಸ್ಟ್ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮೂಲ್ಕಿಯಲ್ಲಿ ಪರಿಸರ ಸ್ವಚ್ಛತಾ ಶಿಬಿರ, ಭಾಷಣ ಸ್ಪರ್ಧೆಯನ್ನು ಇತ್ತೀಚೆಗೆ ಉದ್ಘಾಟಿಸಿ ವಾತನಾಡಿದರು.
ಭಾರತದ ಕಾನೂನು ನೆರವು ಕೇಂದ್ರ ಮಂಗಳೂರು ಘಟಕದ ಅಧ್ಯಕ್ಷ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉದ್ಯಮಿ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಮೂಲ್ಕಿ ನ.ಪಂ. ಆರೋಗ್ಯಾಧಿಕಾರಿ ರವಿಕೃಷ್ಣ ಅವರು ಗ್ರಾಮಸ್ಥರಿಗೆ ಪರಿಸರ ಸ್ವಚ್ಛತೆಯ ಬಗ್ಗೆ ವಾಹಿತಿ ನೀಡಿದರು.
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುವಾನವನ್ನು ಚಂದನ್- ಮೂಲ್ಕಿ ವಿಜಯ ಕಾಲೇಜು, ದ್ವಿತೀಯ- ಮೀನಾಕ್ಷಿ ಲಿಂಗಪ್ಪಯ್ಯಕಾಡು, ತೃತೀಯ- ಶಂಕರ್ ಗದಗ ಪಡೆದರು. ಪರಿಸರ ಸ್ವಚ್ಛತಾ ಸಂಘ ಮೂಲ್ಕಿ ಘಟಕದ ಅಧ್ಯಕ್ಷ ಶಂಕರ್ ಗದಗ ಅವರನ್ನು ಸನ್ಮಾನಿಸಲಾಯಿತು.
ಮೋಹಿತಾ ಸ್ವಾಗತಿಸಿದರು. ಮೂಡುಬಿದಿರೆ ಕೋರ್ಟ್ ಸಿಬ್ಬಂದಿ ಅಕ್ಬರ್ ನಿರೂಪಿಸಿದರು. ಚೈತ್ರಾ ವಂದಿಸಿದರು.
ತಂಬಾಕು ತಿಂದು ರಸ್ತೆಗೆ ಉಗುಳಬಾರದು. ತಂಬಾಕು ಪ್ಯಾಕೆಟ್ ರಸ್ತೆಗೆ ಎಸೆಯಬಾರದು. ಸಿಗರೇಟ್‌ನ ಕಸ, ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ರಸ್ತೆಗೆ ಸುರಿಯದೆ ನಗರ ಪಂಚಾಯಿತಿಯ ಕಸದ ಡಬ್ಬಿಯಲ್ಲೇ ಹಾಕಿ ಪರಿಸರ ಸಂರಕ್ಷಣೆ ವಾಡಬೇಕು. ಗ್ರಾಮಸ್ಥರ ಮನ ಪರಿವರ್ತನೆಗಾಗಿ ಜಾಗೃತಿ ಮೂಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತ್ಯಾಜ್ಯ ವಸ್ತುಗಳು ಶೇಖರಣೆಯಿಂದ ಪರಿಸರ ನಾಶವಾಗಿ ಆರೋಗ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಈ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸೋಣ. ಡೇನಿಯಲ್ ದೇವರಾಜ್, ಅಧ್ಯಕ್ಷರು, ಭಾರತದ ಕಾನೂನು ನೆರವು ಕೇಂದ್ರ ಮಂಗಳೂರು ಘಟಕ