

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಏಳನೇ ವೇತನ ಆಯೋಗ ಜಾರಿಯಿಂದಾಗಿ ಸರ್ಕಾರಕ್ಕೆ ವರ್ಷಕ್ಕೆ 20 ಸಾವಿರ ಕೋಟಿ ಹೊರೆಯಾಗಲಿದೆ. ಆದರೂ ಸರ್ಕಾರಿ ನೌಕರರ ಹಿತ ಕಾಯುವ ದೃಷ್ಟಿಯಿಂದ 7ನೇ ವೇತನ ಆಯೋಗ ಜಾರಿಗೊಳಿಸಿದೆ ಎಂದು ಸಹಕಾರ
ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲೀ ಮರಿಯಪ್ಪ ರಂಗ ಮಂದಿರದಲ್ಲಿ ಶನಿವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಹಾಗೂ ಶಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದೆ. ನೌಕರರ ಬಹುದಿನಗಳ ಬೇಡಿಕೆಯಾದ ಓಪಿಎಸ್ ಜಾರಿಗೆ ನಮ್ಮ ಬದ್ಧವಾಗಿದೆ. ಹಿಂಬಡ್ತಿಯಿಂದ ರಾಜ್ಯದ 1.20 ಲ ಶಿಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಇದನ್ನು ಪರಿಶೀಲನೆ ನಡೆಸಿ ಎಂದು ಶಿಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದಿದ್ದು, ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಶಿಕ ರಾಷ್ಟ್ರದ ಉನ್ನತ ಸ್ಥಾನ ಅಲಂಕರಿಸಬಹುದು ಎಂಬುದನ್ನು ತೋರಿಸಿಕೊಟ್ಟ ರಾಧಾಕೃಷ್ಣನ್ ಮತ್ತು ಪತ್ರಿಕೆ ಹಂಚಿದ ಹಣದಿಂದ ಶಿಣ ಪಡೆದು ಉನ್ನತ ಸ್ಥಾನಕ್ಕೇರಿದ ಅಬ್ದುಲ್ ಕಲಾಂ ನಮಗೆ ರೋಲ್ ಮಾಡೆಲ್ಗಳಾಗಿದ್ದು, ಅವರ ಜೀವನದ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಣ ದೊರೆಯದಿದ್ದಲ್ಲಿ ಸಮಾಜಕ್ಕೆ ಹೊರೆಯಾಗಲಿದ್ದಾರೆ. ಯಾರೂ ಸಹ ದಡ್ಡರಲ್ಲ. ಎಲ್ಲರಿಗೂ ಸಮಾನ ಬುದ್ಧಿಶಕ್ತಿ ಇರುತ್ತದೆ. ಶಿಕರು ಸರ್ಕಾರ ಭಾಗ. ಜನರು ಸರ್ಕಾರದಿಂದ ಏನೆಲ್ಲ ನಿರೀೆ ಇಟ್ಟಿರುತ್ತಾರೋ ಅದನ್ನು ಈಡೇರಿಸುವುದು ಶಿಕರ ಜವಾಬ್ದಾರಿ ಎಂದರು.
ಶಾಲೆಗಳಲ್ಲಿ ಶೌಚಗೃಹ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಸಿಎಸ್ಆರ್ ಫಂಡ್ನಲ್ಲಿ ಒದಗಿಸಲಾಗುವುದು ಎಂದರು. ಪ್ರಾಥಮಿಕ ಶಾಲಾ ಶಿಕರ ಸಂದ ಜಿಲ್ಲಾಧ್ಯ ವೆಂಕಟರಂಗಾರೆಡ್ಡಿ, ತಾಲೂಕು ಅಧ್ಯ ಸಂಜಯ್, ಪ್ರೌಢಶಾಲಾ ಸಹ ಶಿಕರ ಸಂದ ಅಧ್ಯ ರಂಗದಾಮಯ್ಯ, ಡಿವೈಎಸ್ಪಿ ರಾಮಚಂದ್ರಪ್ಪ, ಪುರಸಭೆ ಮಾಜಿ ಅಧ್ಯರಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯ ಕೆ.ಟಿ.ಸಿದ್ದೇಶ್ವರ, ಜಿಪಂ ಮಾಜಿ ಸದಸ್ಯ ಚಿನ್ನಪ್ಪ ಉಪನ್ಯಾಸಕ ರಂಗಪ್ಪ ಇದ್ದರು.
ಇತಿಹಾಸ ಸೃಷ್ಟಿ: ಈ ಹಿಂದೆ ಒಕ್ಕಲಿಗ ಸಮುದಾಯದವರನ್ನು ಪುರಸಭೆಗೆ ಅಧ್ಯರನ್ನಾಗಿ ಮಾಡುವ ಅವಕಾಶ ಅನಿತಾ ಕುಮಾರಸ್ವಾಮಿ ಮತ್ತು ವೀರಭದ್ರಯ್ಯ ಅವರಿಗೆ ಇತ್ತು. ಆದರೆ ಅವರು ಮಾಡಲಿಲ್ಲ. ಎಲ್ಲ ಸಮುದಾಯಗಳಿಗೂ ರಾಜಕೀಯ ಪ್ರಾತಿನಿದ್ಯ ದೊರೆಯಬೇಕೆಂಬ ಉದ್ದೇಶ ನನ್ನದು. ಈಗ ಪುರಸಭೆ ಅಧ್ಯರಾಗಿರುವ ಲಾಲಾಪೇಟೆ ಮಂಜುನಾಥ್ ಜೆಡಿಎಸ್ನಿಂದ ಗೆದ್ದಿದ್ದರೂ ನಮ್ಮಲ್ಲಿ ಗುರುತಿಸಿಕೊಂಡರು. ಅವರಿಗೆ ಸ್ವಂತ ಕೆಲಸ ಮಾಡಿಸಿಕೊಳ್ಳುವ ಅವಕಾಶವಿದ್ದರೂ ಜನರ ಕೆಲಸ ಮಾಡಿಕೊಡಿ ಅಂತ ಹೇಳಿರುವುದು ನನ್ನ ಮನಸ್ಸನ್ನು ಗೆದ್ದಿತು. ಈ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ಅವರಿಗೆ ಅಧ್ಯ ಸ್ಥಾನ ದೊರೆತಿದೆ. ಈ ಹಿಂದೆ ಒಕ್ಕಲಿಗರು ಯಾರು ಅಧ್ಯರಾಗಿರಲಿಲ್ಲ. ಈಗ ಇವರು ಅಧ್ಯರಾಗಿದ್ದು, ಇತಿಹಾಸ ಸೃಷ್ಟಿಯಾಗಿದೆ ಎಂದು ಸಚಿವ ರಾಜಣ್ಣ ತಿಳಿಸಿದರು.