

ಗುರುಗುಂಟಾ: ಗ್ರಾಮದ ಖುರೈಷಿ ಗಲ್ಲಿ ಮೂಲಕ ಸುರಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದ 9 ಹಸುಗಳನ್ನು ಶುಕ್ರವಾರ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಹಿಂದೂ ಕಾರ್ಯಕರ್ತನನ್ನು ನೋಡಿದ ಚಾಲಕ ಬುಲೆರೋ ವಾಹನವನ್ನು ಖುರೈಷಿ ಗಲ್ಲಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ವಾಹನದಲ್ಲಿ 9 ಹಸು ಮತ್ತು ಕರುಗಳನ್ನು ಹಗ್ಗದಿಂದ ಬಾಯಿ, ಕೈ, ಕಾಲು ಕಟ್ಟಲಾಗಿತ್ತು. ಹಿಂದೂ ಕಾರ್ಯಕರ್ತ ನೀಡಿದ ಮಾಹಿತಿಯನ್ವಯ ಹಟ್ಟಿಚಿನ್ನದಗಣಿ ಪೊಲೀಸರು ಮಧ್ಯರಾತ್ರಿ ಸ್ಥಳಕ್ಕೆ ದೌಡಾಯಿಸಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾತ್ಮಿದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್‌ಐ ಧರ್ಮಣ್ಣನನ್ನು ಗುರುಗುಂಟಾಕ್ಕೆ ರಾತ್ರಿ ಕಳುಹಿಸಿಕೊಟ್ಟಿದ್ದೆ. ಚಾಲಕ ಪರಾರಿಯಾಗಿದ್ದು ಸದ್ಯ ಹಸು ಮತ್ತು ಕರುಗಳು ಹಾಗೂ ಸಾಗಾಣಿಕೆಗೆ ಬಳಿಸಿದ ವಾಹನ ಪೊಲೀಸ್ ಠಾಣೆ ವಶದಲ್ಲಿವೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಹೊಸಕೇರಪ್ಪ ಪಿಐ,ಪೊಲೀಸ್ ಠಾಣೆ ಹಟ್ಟಿ ಚಿನ್ನದ ಗಣಿ ದೇಶದಲ್ಲಿ ಗೋಹತ್ಯೆ ನಿಷೇಧವಿದ್ದರೂ ಪ್ರಸ್ತುತ ರಾಜ್ಯ ಸರ್ಕಾರದ ಬೆಂಬಲ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಈ ರೀತಿಯ ಕೃತ್ಯಗಳು ರಾಜಾರೋಷದಿಂದ ನಡೆಯುತ್ತಿರುವುದು ಖಂಡನೀಯ. ನಾವೇ ಪೊಲೀಸರಿಗೆ ಮಾಹಿತಿ ನೀಡಿ ಎಫ್‌ಐಆರ್ ಆಗುವಂತೆ ನೋಡಿಕೊಂಡಿದ್ದೇವೆ. ಪೊಲೀಸರು ತನಿಖೆ ಕೈಗೊಂಡು ಪರಾರಿಯಾದ ವಾಹನ ಚಾಲಕ ಮತ್ತು ಮಾಲಿಕನನ್ನು ಬಂಧಿಸಬೇಕು.ಹನುಮಂತ ಅಂಬಿಗೇರ್,ಹಿಂದೂ ಕಾರ್ಯಕರ್ತ ಗುರುಗುಂಟಾ.