

ಹೊಸಕೋಟೆ: ನಗರದ ಎ.ಆರ್.ಬಡಾವಣೆಯ ಕಸಾಯಿಖಾನೆ ಮೇಲೆ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ದಾಳಿ ಮಾಡಿ 5 ಜೀವಂತ ವಯಸ್ಸಾದ ಎತ್ತುಗಳು, 1 ಗಂಡು ಕರು, ಹಾಗೂ ಒಂದು ಹಸು ರಕ್ಷಣೆ ಮಾಡಿ ಜೀವದಯಾ ಗೋಶಾಲೆಗೆ ಬಿಟ್ಟಿದ್ದಾರೆೆ.
ಗುರುವಾರ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ದಾಳಿ ಮಾಡುವ ಮುನ್ನ ಐದು ಹಸುಗಳನ್ನು ವಧೆ ಮಾಡಲಾಗಿತ್ತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಕಸಾಯಿಖಾನೆ ನಯಾಜ್ ಪಾಷ ಎಂಬುವವರದಾಗಿದ್ದು, ದಾಳಿ ಮಾಡಿದ ಸಂದರ್ಭದಲ್ಲಿ ನಯಾಜ್ ಪಾಷ ಪರಾರಿಯಾಗಿದ್ದಾನೆೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಮಾಂಸದ ಅಕ್ರಮ ಹೋಟೆಲ್‌ಗಳು ತಲೆಎತ್ತಿದ್ದು, ಪ್ರತಿ ದಿನ ಹತ್ತಾರು ಗೋವುಗಳನ್ನು ವಧೆ ಮಾಡಲಾಗುತ್ತಿದೆ, ಇದು ಕಾನೂನು ಬಾಹಿರ. ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು. - ಪುನೀತ್ ಕೆರೆಹಳ್ಳಿ ರಾಷ್ಟ್ರ ರಕ್ಷಣಾ ಅಧ್ಯಕ್ಷ