ವಾಹನದಲ್ಲಿ ಸಾಗಿಸುತ್ತಿದ್ದ ಕರುಗಳ ರಕ್ಷಣೆ

ಫೋಟೋ ಶೀರ್ಷಿಕೆ 29 ಸಿಆರ್_ಪಿ-1ಎ
ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರುಗಳನ್ನುಚನ್ನರಾಯಪಟ್ಟಣದಲ್ಲಿ ಪೊಲೀಸರು ರಕ್ಷಿಸಿದರು.
Published on

ಚನ್ನರಾಯಪಟ್ಟಣ: ಸರಕು ಸಾಗಿಸುವ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 25 ಕರುಗಳನ್ನು ಶುಕ್ರವಾರ ಮುಂಜಾನೆ ಪೊಲೀಸರು ರಕ್ಷಿಸಿದ್ದಾರೆ.

ಬಾಗೂರು ರಸ್ತೆ ಕಡೆಯಿಂದ ಮೈಸೂರು ಕಡೆಗೆ ವಾಹನದಲ್ಲಿ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಕ್ರೂರವಾಗಿ ತುಂಬಿಕೊಂಡು ಹೋಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮಾರೇನಹಳ್ಳಿ ಸರ್ಕಲ್ ಬಳಿ ಪೊಲೀಸರು ದಾಳಿ ಮಾಡಿ ಕರುಗಳನ್ನು ರಕ್ಷಿಸಿದ್ದಾರೆ.

ಚಾಲಕ ಪರಾರಿಯಾಗಿದ್ದು, ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕರುಗಳನ್ನು ಅರಸೀಕೆರೆಯ ಗೋಶಾಲೆಗೆ ಸಾಗಿಸಲಾಗಿದೆ ಎಂದು ಪಟ್ಟಣ ಠಾಣೆಯ ಪಿಎಸ್‌ಐ ಭರತ್‌ರೆಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net