20 ಗೋವುಗಳ ರಕ್ಷಣೆ

FotoJet 111111
Published on

ಬಂಗಾರಪೇಟೆ:ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್​ಅನ್ನು ಬೆನ್ನತ್ತಿದ ಯುವಕರ ತಂಡ ಸುಮಾರು 20 ಗೋವುಗಳನ್ನು ರಕ್ಷಿಸಿದೆ.

ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕ್ಯಾಂಟರ್​ ತಡೆದು ಗೋವುಗಳ ಸಮೇತ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಗಾರಪೇಟೆ ಹೊರ ವಲಯದ ಹುಣಸನಹಳ್ಳಿ ಮತ್ತು ಅತ್ತಗಿರಿಕೊಫ್ಪ ಗ್ರಾಮಗಳ ನಡುವಿನ ರ್ನಿಜನ ಪ್ರದೇಶದ ಸಮೀಪ ಗುರುವಾರ ರಾತ್ರಿ ಗೋವುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಕ್ಯಾಂಟರ್​ ವಶಕ್ಕೆ ಪಡೆಯಲಾಗಿದೆ. ಗಾಂಧಿ ಜಯಂತಿ ಇದ್ದರೂ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಬಂಗಾರಪೇಟೆ ಪೊಲೀಸರು ಕ್ಯಾಂಟರ್​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪುರಸಭೆ ಸದಸ್ಯ ವಸಂತ್​, ಕರವೇ ಚಲಪತಿ, ಅಯ್ಯ ಮಂಜು ಇತರರು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net