ಬಂಗಾರಪೇಟೆಯಲ್ಲಿ 12 ಸೀಮೆ ಹಸುಗಳ ರಕ್ಷಣೆ

30 Bpt 2
ಹಸುಗಳನ್ನು ಬಂಗಾರಪೇಟೆಯಿಂದ ಕೆಜಿಎಫ್​ ಗೋಶಾಲೆಗೆ ಕಳುಹಿಸಿದರು.
Published on

ಬಂಗಾರಪೇಟೆ: ಕಸಾಯಿಖಾನೆಗೆ ಕೊಂಡೊಯ್ಯಲು ಖರೀದಿಸಿದ್ದು ಎನ್ನಲಾದ 12 ಹಸುಗಳನ್ನು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಸೀಲ್ದಾರ್​ ದಯಾನಂದ್​ ಶನಿವಾರ ವಶಪಡಿಸಿಕೊಂಡು ಕೆಜಿಎಫ್​ನ ಗೋಶಾಲೆಗೆ ಕಳುಹಿಸಿದರು.


ಪಟ್ಟಣದ ಸಿ.ರಹೀಂ ಕಾಂಪೌಂಡ್​ನ ಮುಬಾರಕ್​ ಶಾದಿ ಮಹಲ್​ ಹಿಂಭಾಗದಲ್ಲಿ ಜೆರ್ಸಿ ಮತ್ತು ಎಚ್​ಎಫ್​ ತಳಿಯ 12 ಹಸುಗಳನ್ನು ಕಟ್ಟಿ ಹಾಕಿದ್ದ ಬಗ್ಗೆ ಸಾರ್ವಜನಿಕರು ತಹಸೀಲ್ದಾರ್​ ದಯಾನಂದ್​ಗೆ ದೂರವಾಣಿಯ ಮೂಲಕ ದೂರು ನೀಡಿದ್ದರು. ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಅಕ್ರಮ ಹಸುಗಳ ಬಂಧನ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.


ಶೆಡ್​ ಮಾಲೀಕ ಸೈಯದ್​ ಅತಾವುಲ್ಲಾ, ಸೈಯದ್​ ಹಿದಾಯತ್​ವುಲ್ಲಾ ಮತ್ತು ಸಾಧಿಕ್​ ಪಾಷಾ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಸ್ಥಳಕ್ಕೆ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮು ಭೇಟಿ ನೀಡಿ ಅವುಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ ವರದಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net