ಕಣ್ಣಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ

22 bir 3
Published on

ಬೀರೂರು: ಮನುಷ್ಯನ ಪಂಚೇಂದ್ರೀಯಗಳಲ್ಲಿ ಕಣ್ಣು ಪ್ರಮುಖವಾಗಿದ್ದು, ಸೂಕ್ಷ್ಮ್ಮವಾದ ಈ ಅಂಗವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ಪತ್ರೆ.ಕೆ.ಶಿವಪ್ಪಯ್ಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕಂಚೇಗೌಡ ಹೇಳಿದರು.

ಪಟ್ಟಣದ ಎಸ್‌ಜೆಎಂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ನೀಡುವುದರಿಂದ ಸೂಕ್ಷ್ಮ ಕಣ್ಣುಗಳಿಗೆ ಒತ್ತಡ ನೀಡಲಾಗುತ್ತಿದೆ. ಇಂದಿನ ಆಹಾರ ಪದ್ದತಿ, ವೈಜ್ಞಾನಿಕತೆ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಬಳಕೆಯಿಂದ ಬಾಲ್ಯದಲ್ಲಿಯೇ ಕನ್ನಡಕ ಬಳಸುವ ಸ್ಥಿತಿಗೆ ತಲುಪಿದ್ದೇವೆ. ಆದ್ದರಿಂದ ಸಮಸ್ಯೆಗಳು ಎದುರಾದರೆ ತಕ್ಷಣ ವೈದ್ಯರ ಬಳಿ ತಪಾಸಣೆಗೆ ಒಳಪಡಿಸಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ ಸಿ.ಸಿ.ಕುಮಾರ್, ಹೆಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ, ಹೆಚ್.ಜೆ.ದಿನೇಶ್, ನಿವೃತ್ತ ಸಿಬ್ಬಂದಿ ನಿಜಗುಣಯ್ಯ, ಶಂಕರ ಕಣ್ಣಿನ ಆಸ್ಪತ್ರೆಯ ಡಾ.ಕಾಜಲ್, ತ್ಯಾಗರಾಜ್, ಬಿ.ವಿ.ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net