ಮನೆಯಲ್ಲಿ ಕಾಣಿಸಿಕೊಂಡ ಉಡ ರಕ್ಷಣೆ

21-KGL-5
ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದ ಮನೋಜ್ ನಿವಾಸದಲ್ಲಿ ಕಾಣಿಸಿಕೊಂಡಿದ್ದ ಉಡವನ್ನು ಸ್ನೇಕ್ ಬಾಬು ಹಿಡಿದು ಸಂರಕ್ಷಿಸಿರುವುದು. ನಂದೀಶ್, ಜೈದೇವ್ ಇತರರು ಇದ್ದರು.
Published on

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದ ಮನೋಜ್ ನಿವಾಸದಲ್ಲಿ ಕಾಣಿಸಿಕೊಂಡಿದ್ದ ಉಡವನ್ನು ಶನಿವಾರ ಸ್ನೇಕ್ ಬಾಬು ಹಿಡಿದು ಅರಣ್ಯಾಧಿಕಾರಿ ಸೂಚನೆಯಂತೆ ಭರಚುಕ್ಕಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಹೊಂಡರಬಾಳು ಗ್ರಾಮದ ರಾಜು ಮನೆಯಲ್ಲಿ ಕಾಣಿಸಿಕೊಂಡಿದ್ದ 5 ಅಡಿ ಉದ್ದದ ಹಾವನ್ನು ಸ್ನೇಕ್ ಬಾಬು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸ್ನೇಕ್ ಬಾಬು ಕಾರ್ಯವನ್ನು ಡಿಆರ್‌ಎಫ್‌ಒ ನಂದೀಶ್ ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net