

ಚಿಕ್ಕೋಡಿ: ನೀರು ಮತ್ತು ಪರಿಸರ ಸಂರಕ್ಷಿಸಲು ಎಲ್ಲರೂ ಬದ್ಧರಾಗಿರಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹರೀಶ ಪಾಟೀಲ ಹೇಳಿದರು.
ತಾಲೂಕಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಜಲ ದಿನ ಉದ್ಘಾಟಿಸಿ ಮಾತನಾಡಿ, ಜಗತ್ತಿನ 1 ಲಕ್ಷ ಲೀ. ನೀರಿನಲ್ಲಿ 6 ಲೀ. ನೀರು ಮಾತ್ರ ಉಪಯೋಗಿಸಲು ಯೋಗ್ಯವಾಗಿದ್ದು, ಅದರ ಸದ್ಬಳಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಆರೋಗ್ಯಯುತ, ಸ್ವಚ್ಛ ಪರಿಸರ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಗೋಪಾಲ ಸನತಂಗಿ ಮಾತನಾಡಿ, ಕೈಗಾರಿಕಾ ತ್ಯಾಜ್ಯಗಳನ್ನು ನದಿಗಳಿಗೆ ಬಿಡುವುದನ್ನು ನಿಲ್ಲಿಸಬೇಕು. ಅಂತರ್ಜಲ ಮಟ್ಟ ಕುಸಿಯುವುದನ್ನು ತಡೆಗಟ್ಟಲು ಮಳೆನೀರು ಸಂಗ್ರಹಿಸಬೇಕು ಎಂದರು.
ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಮಾತನಾಡಿದರು. ಕೊಲ್ಲಾಪುರ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಾಜಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನಯ್ಯ ಹಿರೇಮಠ ಉಪನ್ಯಾಸ ನೀಡಿದರು.
ಕಲ್ಮೇಶ ಕಿವಡ, ಎಸ್.ಆರ್.ವಾಲಿ, ಡಾ.ಎಂ.ಎಸ್.ಕಬಾಡಗಿ, ಎಂ.ಬಿ.ಪಾಟೀಲ, ಸುನೀಲ ಹೆಬ್ಬಾಳೆ, ಕುಮಾರ ಚೌಗಲಾ, ಡಾ.ಸಂಜಯ ಅಂಕಲಿ, ಡಾ.ಮಹಾಂತಯ್ಯ ಮಠಪತಿ, ಡಾ.ಲಕ್ಷ್ಮಣ ಅಂಬಿ, ಸುಶೀಲಕುಮಾರ ಭಗಾಟೆ, ವಿನಯ ಮನಗೂಳೆ, ಬಾಳಪ್ಪ ನವಲಾಯಿ, ರಂಜಿನಿ ಚವ್ಹಾಣ, ವಿದ್ಯಾ ಅಂಗಡಿ ಇತರರಿದ್ದರು. ಪ್ರದೀಪ ಹೊದ್ಲೂರ ಸ್ವಾಗತಿಸಿದರು. ತೇಜಸ್ವಿನಿ ಪಾಟೀಲ ಮತ್ತು ಮರಿಯುಮ್ ಪಠಾಣ ನಿರೂಪಿಸಿದರು. ಶಂಕರಗೌಡ ಪಾಟೀಲ ವಂದಿಸಿದರು.