ಪರಿಸರ ರಕ್ಷಣೆಯೂ ದೇಶ ಸೇವೆ

Protecting the environment is also serving the country.
ಬನಹಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿದ ಶಾಸಕ ಸಿದ್ದು ಸವದಿ. ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಡ ಇದ್ದರು.
Published on

ರಬಕವಿ-ಬನಹಟ್ಟಿ: ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗದೆ ಅದು ನಿತ್ಯದ ಕಾಯಕವಾಗಬೇಕು. ಗಿಡ-ಮರ ನೆಡವುದರ ಜತೆಗೆ ಅವುಗಳ ರಕ್ಷಣೆಯಲ್ಲಿ ನಾವು ತೊಡಗಬೇಕು. ಪರಿಸರ ರಕ್ಷಣೆ ಸಹ ದೇಶ ಸೇವೆಯಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಬನಹಟ್ಟಿಯ ಗಣಪತಿ ದೇವಸ್ಥಾನ ಬಡಾವಣೆಯಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ನಾಶದಿಂದಾಗಿ ಭೂಮಿ ಅನೇಕ ಸಮಸ್ಯೆ ಎದುರಿಸುತ್ತಿದೆ. ಪ್ರತಿಯೊಬ್ಬರೂ ತಾವು ನೆಟ್ಟ ಸಸಿಗಳ ರಕ್ಷಣೆಗೆ ಮುಂದಾಗಬೇಕು. ಗಿಡ ಮರಗಳ ಬಗ್ಗೆ ದಿನ ನಿತ್ಯ ಕಾಳಜಿ ತೆಗೆದುಕೊಳ್ಳಬೇಕು. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಅತ್ಯಂತ ಮುಖ್ಯವಾಗಿದೆ ಎಂದರು.

ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಶಿವಾನಂದ ಗಾಯಕವಾಡ, ಸಿದ್ದನಗೌಡ ಪಾಟೀಲ, ರವಿ ಕೊರ್ತಿ, ಚಿದಾನಂದ ಹೊರಟ್ಟಿ, ಈರಣ್ಣ ಚಿಂಚಖಂಡಿ, ಅಶೋಕ ರಾವಳ, ಶ್ರೀಶೈಲ ಗಸ್ತಿ, ಅರುಣ ಬುದ್ನಿ, ಶಿವಾನಂದ ಬುದ್ನಿ, ಗೌರಿ ಮಿಳ್ಳಿ, ಪವಿತ್ರಾ ತುಕ್ಕನ್ನವರ, ವಿದ್ಯಾ ಧಬಾಡಿ, ಸವಿತಾ ಹೊಸೂರ, ದೀಪಾ ಕೊಣ್ಣೂರ, ಮಹಾದೇವ ಆಲಕನೂರ, ಶಂಕರ ಹುನ್ನೂರ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ಡಾ. ಶಂಕರ ವಸದ, ವಿಜಯ ಕಲಾಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net