ಪ್ರಕೃತಿ ಕಾಪಾಡಿದರೆ ಸ್ವಸ್ಥ ಬದುಕು

gan (4)
Published on

ಕುಂದಾಪುರ: ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ನಾವು ಸುಂದರ ಪ್ರಕೃತಿಯನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕು. ಪ್ರತಿನಿತ್ಯ ನೆಲ ಜಲವನ್ನು ಹಾಳು ವಾಡುವ ಕಾಯಕವನ್ನು ಬಹಳ ಅವಸರದಿಂದ ವಾಡುತ್ತಿದ್ದೇವೆ. ಇದು ಮನುಕುಲದ ನಾಶಕ್ಕೆ ಕಾರಣವಾಗುತ್ತಿದೆ ಎಂದು ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ವ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಹೇಳಿದರು.

ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಹಸಿರೇ ಉಸಿರು ಎನ್ನುವ ಧ್ಯೇಯೋದ್ದೇಶದಿಂದ ಗುರುವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಾದ ತ್ರಿಶಾ ಪರಿಸರದ ಮಹತ್ವದ ಬಗ್ಗೆ ಮತ್ತು ಕ್ಷಿತಿಜ್ ಪ್ಲಾಸ್ಟಿಕ್ ಬಳಕೆ ಮತ್ತು ಅದರಿಂದಾಗುವ ಪರಿಸರ ಹಾನಿಯ ಬಗ್ಗೆ ಹಾಗೂ ಸೃಷ್ಟಿ ಸಂತೋಷ್ ಸಾಲುಮರದ ತಿಮ್ಮಕ್ಕನ ಕುರಿತು ವಾತನಾಡಿದರು. ತ್ಯಾಜ್ಯಗಳ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪ್ರಾಂಶುಪಾಲೆ ಡಾ.ರೂಪಾ ಶೆಣೈ ಉಪಸ್ಥಿತರಿದ್ದರು. ಅದಿತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸೃಜನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net