ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

22.HBH. 5
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ನವೋದಯ ಯುವಕ ಸಂಘ ಮತ್ತು ಮಾರುತಿ ಭಜನೆ ಮಂಡಳಿಯಿಂದ ಆಯುರ್ವೇಕ್ ಕಣ್ಣಿನ ಹನಿ ಕಾರ್ಯಕ್ರಮ ನಡೆಯಿತು. ಉತ್ತಂಗಿ ಮಠದ ಸೋಮಶೇಖರ ಸ್ವಾಮೀಜಿ, ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ, ತಾಲೂಕು ಅಧ್ಯಕ್ಷ ಲಿಂಗರಾಜ ಯಾದವ್ ಮತ್ತಿತರರು ಇದ್ದರು.
Published on

ಹಗರಿಬೊಮ್ಮನಹಳ್ಳಿ: ಕಣ್ಣಿದ್ದರೆ ಜಗತ್ತು, ಕಣ್ಣಿಲ್ಲವೆಂದರೆ ಶೂನ್ಯ ಎಂದು ಉತ್ತಂಗಿ ಮಠದ ಸೋಮಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಂಪಾಪಟ್ಟಣ ಗ್ರಾಮದಲ್ಲಿ ನವೋದಯ ಯುವಕ ಸಂಘ ಮತ್ತು ಮಾರುತಿ ಭಜನೆ ಮಂಡಳಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಆಯುರ್ವೇದಿಕ್ ಕಣ್ಣಿನ ಹನಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಗ್ಲಿಷ್ ಔಷಧಗಳಿಗೆ ಮಾರುಹೋಗುವ ಬದಲಾಗಿ ಆಯುರ್ವೇದಿಕ ಔಷಧ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಅತಿಯಾದ ಮೊಬೈಲ್ ವೀಕ್ಷಣೆ, ಲ್ಯಾಪ್‌ಟಾಪ್‌ಗಳ ಬಳಕೆ ಕಣ್ಣಿಗೆ ಮಾರಕವಾಗಿವೆ. ಕಣ್ಣಿನ ದೋಷಗಳ ನಿವಾರಣೆಗಾಗಿ ಪ್ರತಿ ತಿಂಗಳು 22ನೇ ತಾರೀಖಿನಂದು ಗ್ರಾಮದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ವೈದ್ಯ ನವೀನ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ನಾಗರಾಜ, ನವೋದಯ ಯುವಕ ಸಂಘದ ಅಧ್ಯಕ್ಷ ವಿ.ಹನುಮಂತ, ಮಾರುತಿ ಭಜನೆ ಮಂಡಳಿ ಅಧ್ಯಕ್ಷ ಕಿಟಕಿ ಶಿವಣ್ಣ, ಒಕ್ಕೂಟದ ತಾಲೂಕು ಅಧ್ಯಕ್ಷ ಲಿಂಗರಾಜ ಯಾದವ್, ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅಂಬಳಿ ಕೇಶವಮೂರ್ತಿ, ಸದಸ್ಯರಾದ ಎನ್.ನಾಗರಾಜ, ಟಿ.ಮಂಜುನಾಥ, ವಿಎಸ್‌ಎಸ್‌ಎನ್ ಸದಸ್ಯ ಜಿ.ಶ್ರೀನಿವಾಸ, ಪ್ರಮುಖರಾದ ಕೆ.ಹುಲುಗಪ್ಪ, ಟಿ.ಮಧು, ಜಿ.ಪಕೀರಪ್ಪ, ಗೂಳಿ ಕೊಟ್ರೇಶ, ಭಜಂತ್ರಿ ಸೋಮನಾಥ, ಎಂ.ಈಶಪ್ಪ, ಮಾಲ್ವಿ ಕಿಟ್ಟಪ್ಪ, ಬಿ.ಹುಲುಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net