ಬಾಂಗ್ಲಾ ದಲ್ಲಿರುವ ಹಿಂದುಗಳನ್ನು ರಕ್ಷಿಸಿ

12 nrp 1 (2)
ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆ.ಪಿ.ಸುರೇಶ್‌ಕುಮಾರ್, ಬಿ.ಎಸ್.ಆಶೀಶ್‌ಕುಮಾರ್ ಇದ್ದರು.
Published on

ಎನ್.ಆರ್.ಪುರ: ಬಾಂಗ್ಲಾ ದೇಶದ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದು ಪರಿಷತ್‌ನ ಶೃಂಗೇರಿ ಕ್ಷೇತ್ರ ಮುಖಂಡ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ಬಾಂಗ್ಲಾ ದೇಶದ ಹಿಂದುಗಳ ಮೇಲೆ ಅಲ್ಲಿನ ಭಯೋತ್ಪಾದನೆ ಸಂಘಟನೆ ಕಾರ್ಯಕರ್ತರು ದೌರ್ಜನ್ಯ ಮಾಡುತ್ತಿದ್ದಾರೆ. ಇದನ್ನು ಭಾರತೀಯ ಹಿಂದುಗಳು ನಿರ್ಲಕ್ಷ್ಯ ಮಾಡಿದರೆ ಮುಂದೆ ಭಾರತದ ಹಿಂದುಗಳ ಮೇಲೂ ದೌರ್ಜನ್ಯ ನಡೆಯುವ ಸಾಧ್ಯತೆ ಇದೆ. ಹಿಂದುಗಳ ದೌರ್ಜನ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದರು.
ಬಹಳ ವರ್ಷಗಳ ಹಿಂದೆ ಬಾಂಗ್ಲಾ ಪಾಕಿಸ್ತಾನದ ಒಂದು ಭಾಗವಾಗಿತ್ತು. ನಂತರ ಬಾಂಗ್ಲಾ ಸ್ವತಂತ್ರ ದೇಶವಾಯಿತು.ಅವರು ಸ್ವತಂತ್ರವಾಗಲು ಭಾರತೀಯ ಸೈನಿಕರ ಶ್ರಮ ಕಾರಣ. ಅದನ್ನು ಮರೆತ ಬಾಂಗ್ಲಾ ದೇಶದವರು ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ವಿಷಾದನೀಯ ಎಂದರು.
ಹಿಂದು ಹಿತ ರಕ್ಷಣಾ ಸಮಿತಿ ಮಖಂಡರಾದ ಬಿ.ಎಸ್.ಆಶೀಶ್‌ಕುಮಾರ್, ಜೆ.ಜಿ.ನಾಗರಾಜ್, ಎಂ.ವಿ.ರಾಜೇಂದ್ರ ಕುಮಾರ್, ಜಯರಾಂ, ಕೆಸವಿ ಮಂಜುನಾಥ್, ಅಶ್ವನ್, ಎನ್.ಡಿ.ಪ್ರಸಾದ್, ಅರುಣ ಕುಮಾರ್ ಜೈನ್, ದರ್ಶನ್, ಹಂಚಿನ ಮನೆ ರಾಘವೇಂದ್ರ, ಮಂಜುನಾಥ್‌ಲಾಡ್, ದ್ವಾರಮಕ್ಕಿ ಶ್ರೀನಾಥ್, ಸುರಭಿ ರಾಜೇಂದ್ರ, ಮಧು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net