

ಕಂಪ್ಲಿ: ಶಾಲೆ, ಹಾಸ್ಟೆಲ್ ಪರಿಸರವನ್ನು ಈಡೀಸ್ ಸೊಳ್ಳೆ ಮುಕ್ತ ಮಾಡಲು ಅಧಿಕಾರಿಗಳು, ವಿದ್ಯಾರ್ಥಿಗಳು, ಪಾಲಕರು ಪರಸ್ಪರ ಸಹಕರಿಸಬೇಕು ಎಂದು ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಹೇಳಿದರು.
ಇದನ್ನೂ ಓದಿ: ಎಲ್ಲರೂ ಪರಿಸರ ಕಾಳಜಿ ಹೊಂದಲಿ
ಈಡೀಸ್ ಸೊಳ್ಳೆ ಮುಕ್ತ ಶಿಕ್ಷಣ ಸಂಸ್ಥೆ ಅಭಿಯಾನ ಅಂಗವಾಗಿ ಪಟ್ಟಣದ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಶುಕ್ರವಾರ ಮಾತನಾಡಿದರು. ವಾಸಸ್ಥಳದ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ನೀರು ಸಂಗ್ರಹ ತೊಟ್ಟಿ, ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗ್ರತೆ ತೋರಬೇಕು. ಸ್ವಚ್ಛತೆ ಕಾಪಾಡಲು ಸದಾ ನಿಗಾ ವಹಿಸಬೇಕು ಎಂದರು.
ಶಾಲೆ, ಕಾಲೇಜು, ಸರ್ಕಾರಿ ವಸತಿ ನಿಲಯಗಳಿಗೆ ಬೇಟಿ ನೀಡಿ ನೀರಿನ ಮೂಲ, ನೀರಿನ ಸಂಗ್ರಹಗಾರರಗಳನ್ನು ಪರೀಕ್ಷಿಸಿದರು. ವಿದ್ಯಾರ್ಥಿಗಳು, ಸಿಬ್ಬಂದಿಗೆ ಸ್ವಚ್ಛತೆ ಕಾಪಾಡುವ, ಡೆಂೆ, ಮಲೇರಿಯಾ ಮೊದಲಾದ ಸಾಂಕ್ರಮಿಕ ರೋಗಗಳ ಕುರಿತು ಮಾಹಿತಿ ನೀಡಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಅಡುಗೆದಾರ ಪಂಪಾಪತಿ ಇತರರಿದ್ದರು.