

ಗಂಗಾವತಿ: ಅವಕಾಶಗಳನ್ನು ಬಳಸಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಹೇಳಿದರು.
ಇದನ್ನೂ ಓದಿ: ಮೇಳದ ಕಲಾವಿದರಿಗೆ ಸದೃಢ ಅವಕಾಶ
ನಗರದ ನೆಹರು ಉದ್ಯಾನದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ, ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸ್ಥಳದಲ್ಲಿ ನಿಸರ್ಗ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರ ಬಿಡಿಸುವುದು ಒಂದು ಕಲೆ, ಅಭ್ಯಾಸದಿಂದ ಕಲೆ ರೂಢಿಸಿಕೊಳ್ಳಬೇಕಿದೆ. ಅಧುನಿಕ ತಂತ್ರಜ್ಞಾನದಿಂದ ಕಲಾ ಮಾಧ್ಯಮದ ಮೇಲೆ ಪರಿಣಾಮ ಬೀರುತ್ತಿದ್ದು, ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸ್ಪರ್ಧೆ ಆಯೋಜನೆ ಮತ್ತು ವೇದಿಕೆ ಕಲ್ಪಿಸುವ ಮೂಲಕ ನಶಿಸಿ ಹೋಗುತ್ತಿರುವ ಕಲಾ ಪ್ರಕಾರವನ್ನು ರಕ್ಷಿಸಬೇಕಿದೆ ಎಂದರು.
ಸ್ಪರ್ಧೆಯಲ್ಲಿ ಲಿಟಲ್ ಹಾರ್ಟ್ಸ್ ಶಾಲೆ ಮಧುಶ್ರೀ (ಪ್ರಥಮ), ಕೊಟ್ಟೂರೇಶ್ವರ ಪ್ರೌಢ ಶಾಲೆಯ ಆರ್ೀ(ದ್ವಿತೀಯ), ವಿದ್ಯಾಗಿರಿ ಎಂಎನ್‌ಎಂ ಪ್ರೌಢ ಶಾಲೆ ವಾಜೀದ್ (ತೃತೀಯ) ಸ್ಥಾನ ಪಡೆದರು. ಬಳಿಕ ಅವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಶಾಲೆಯ 57 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವೇದಿಕೆ ಅಧ್ಯಕ್ಷ ಎಂ.ಪರಶುರಾಂ ಪ್ರಿಯ, ಸಂಸ್ಥೆ ಅಧ್ಯಕ್ಷ ರಗಡಪ್ಪ ಹೊಸಳ್ಳಿ, ಪದಾಧಿಕಾರಿಗಳಾದ ಅಮರೇಶ ಹಿರೇಮಠ, ಮುತ್ತಣ್ಣ ಕಲಾವಿದರಾದ ಎನ್.ಆರ್.ರಾಯಭಾಗಿ, ಕೃಷ್ಣ ಆಶೀಷ್, ಶಾಮೀದ್ ಲಾಠಿ ಇತರರಿದ್ದರು.