ಸಾರ್ವಜನಿಕ ಆಸ್ತಿ ರಕ್ಷಿಸಿ

HND 5-4
ಅಮೀನಗಡ ಸಮೀಪ ಸೂಳೆಬಾವಿ ಗ್ರಾಮದಲ್ಲಿ ರಾಮಯ್ಯಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಂಪನ್ಮೂಲಗಳ ಸಂರಕ್ಷಣೆಯ ಸಂಭ್ರಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವೀಂದ್ರ ಪಿ. ಕಲಬುರ್ಗಿ, ಜಾಸ್ಮಿನ್ ಕಿಲ್ಲೇದಾರ, ಪಿಎಸ್‌ಐ ಜ್ಯೋತಿ ವಾಲಿಕಾರ ಮತ್ತಿತರರಿದ್ದಾರೆ.
Published on

ಹುನಗುಂದ : ಸಾರ್ವಜನಿಕ ಆಸ್ತಿಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ರಾಮಯ್ಯಸ್ವಾಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರವೀಂದ್ರ ಪಿ. ಕಲಬುರ್ಗಿ ಹೇಳಿದರು.

ಸೂಳೆಬಾವಿ ಗ್ರಾಮದ ರಾಮಯ್ಯಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಂಪನ್ಮೂಲಗಳ ಸಂರಕ್ಷಣೆಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ದೇಶಾಭಿಮಾನದ ಜತೆಗೆ ಭೂಮಿ ಹಾಗೂ ನೀರಿನ ಸದ್ಬಳಕೆ ಕುರಿತು ಅರಿವು ಮೂಡಿಸಬೇಕು. ನಮ್ಮ ಸಂಸ್ಥೆ ಹಣಕ್ಕಾಗಿ ಶಿಕ್ಷಣ ನೀಡದೆ, ಜವಬ್ದಾರಿಯುತ ಪ್ರಜೆಗಳನ್ನು ರೂಪಿಸುವ ಗುರಿ ಹೊಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕ್ಲಿಲ್ಲೇದಾರ ಮಾತನಾಡಿ, ಸಂಸ್ಥೆಯು ಕಾರ್ಯಕ್ರಮದ ಆಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸಂಪನ್ಮೂಲಗಳ ತಿಳಿವಳಿಕೆ ಹಾಗೂ ಅವುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದೆ ಎಂದರು.

ಸಂಸ್ಥೆಯ ಗೌರವ ಅಧ್ಯಕ್ಷ ಕೃಷ್ಣಾ ರಾಮದುರ್ಗ ಹಾಗೂ ಪಿಎಸ್‌ಐ ಜ್ಯೋತಿ ವಾಲಿಕಾರ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಉಪಾಧ್ಯಕ್ಷ ಯಮನಪ್ಪ ಶಿಲ್ಪಿ, ಗಾಯತ್ರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಹೇಮಂತ ದುತ್ತರಗಿ, ನ್ಯಾಯವಾದಿ ರಂಜಾನ್ ನದಾ, ಬಸವರಾಜ ರಾಮದುರ್ಗ, ಹೆಸ್ಕಾಂ ಅಧಿಕಾರಿ ಗೋಪಾಲ ಪೂಜಾರಿ, ಎಸ್.ಎಸ್. ಗೌಡರ, ಎಸ್.ಎಸ್. ಹೊಸಮನಿ, ಪ್ರಾಚಾರ್ಯ ಎ.ಸಿ. ಅತ್ತಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net