ಸಾಗುವಳಿ ರೈತ ಕುಟುಂಬಗಳಿಗೆ ರಕ್ಷಣೆ ನೀಡಿ

Published on

ಮಾನ್ವಿ: ತಾಲೂಕಿನ ಕುರ್ಡಿ ಸೀಮಾಂತರದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ದಬ್ಬಾಳಿಕೆ ನಡೆಸುತ್ತಿರುವವ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕೆಆರ್‌ಎಸ್ ತಾಲೂಕು ಘಟಕ ಸೊಮವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾಧ್ಯಕ್ಷ ಅಶೋಕ ನೀಲಗಲ್ ಮಾತನಾಡಿ, ಕುರ್ಡಿ ಹೋಬಳಿ ಕುರ್ಡಿ ಸೀಮಾ ಸ.ನಂ 436/2 ವಿಸ್ತೀರ್ಣ 11 ಎಕರೆ 20 ಗುಂಟೆ ಸರ್ಕಾರದ ಹೆಚ್ಚುವರಿ ಜಮೀನಿನಲ್ಲಿ ಕಳೆದ 15 ವರ್ಷಗಳಿಂದ ಎಸ್ಸಿ ವರ್ಗದ ಭೂ ರಹಿತ 11 ರೈತ ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಆದರೆ, ಮಲ್ಲನವಾಡಿ ಉಗಿಳನಾಡ ಕುರ್ಡಿ ಎಂಬುವರು ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಲು ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸುತ್ತಿದ್ದು, ಕಾನೂನು ಕ್ರಮಕೈಗೊಳ್ಳಬೇಕು.

11 ರೈತ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ಅರ್ಜಿಗಳನ್ನು ಪೂರ್ವಾಪರ ಪರಿಶೀಲಿಸಿ ಕಂದಾಯ ಅಧಿಕಾರಿಗಳಿಂದ ಸಾಗುವಳಿ ಜಮೀನಿನ ಸ್ಥಳ ಪಂಚನಾಮೆ ಮಾಡಿಸಿ ಭೂ ನ್ಯಾಯ ಮಂಡಳಿಯಲ್ಲಿ ಮಂಡಿಸಬೇಕು ಎಂದರು.

ಕೆಆರ್‌ಎಸ್ ತಾಲೂಕು ಅಧ್ಯಕ್ಷ ವೀರೇಶ ನಾಯಕ, ಶಿವರಾಜ ದೊಡ್ಡಿ, ವೆಂಕಟೇಶ ನಾಯಕ, ಹುಲಿಗೆಪ್ಪ, ಶಿವಯ್ಯ ನಾಯಕ, ಹನುಮಂತ ಕುಂಬಾರ, ಮಲ್ಲಯ್ಯ ನಾಯಕ, ಮೌಲಪ್ಪ, ಆದೆಪ್ಪ ಕುರ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net